ಕರ್ನಾಟಕ

karnataka

ETV Bharat / state

ಠಾಣೆಯಲ್ಲಿದ್ದ ವಾಹನದ ನಂಬರ್ ಪ್ಲೇಟ್ ನಕಲು ಮಾಡಿ ಸ್ಕೂಟಿಯಲ್ಲಿ ಸುತ್ತಾಡುತ್ತಿರುವ ಭೂಪ - ಬೈಕ್​ ನಕಲಿ ನಂಬರ್​ ಪ್ಲೇಟ್​​

ಖದೀಮನೋರ್ವ ಪ್ರಕರಣವೊಂದರಲ್ಲಿ ಇತ್ಯರ್ಥವಾಗದೆ ಠಾಣೆಯಲ್ಲೇ ಉಳಿದಿದ್ದ ದ್ವಿಚಕ್ರ ವಾಹನದ ನಂಬರ್ ಪ್ಲೇಟ್​ ನಕಲು ಮಾಡಿ ಆ್ಯಕ್ಟಿವ್ ಹೋಂಡಾ ವಾಹನಕ್ಕೆ ಅಳವಡಿಸಿಕೊಂಡು ತಿರುಗಾಡುತ್ತಿರುವ ಪ್ರಕರಣ ಮಂಗಳೂರಲ್ಲಿ ಬೆಳಕಿಗೆ ಬಂದಿದೆ.

man-riding-bike-with-fake-number-plate-in-mangaluru
ಠಾಣೆಯಲ್ಲಿದ್ದ ವಾಹನದ ನಂಬರ್ ಪ್ಲೇಟ್ ನಕಲು ಪ್ರಕರಣ

By

Published : Jan 9, 2022, 10:16 AM IST

ಮಂಗಳೂರು:ಪ್ರಕರಣವೊಂದರಲ್ಲಿ ಇತ್ಯರ್ಥವಾಗದೆ ಠಾಣೆಯಲ್ಲೇ ಉಳಿದಿದ್ದ ದ್ವಿಚಕ್ರ ವಾಹನದ ನಂಬರ್ ಪ್ಲೇಟ್​​ ನಕಲಿಸಿ ಹೋಂಡಾ ಆ್ಯಕ್ಟಿವಾ ಸ್ಕೂಟಿಗೆ ಅಳವಡಿಸಿಕೊಂಡು ತಿರುಗಾಡುತ್ತಿರುವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ವಾಹನಸಹಿತ ಈ ಖದೀಮನ ವಿಡಿಯೋ ಬಿಡುಗಡೆಗೊಳಿಸಿರುವ​ ಪೊಲೀಸರು ಆತನ ಪತ್ತೆಗೆ ಸಹಕರಿಸುವಂತೆ ಕೋರಿದ್ದಾರೆ.

ಪ್ರಕರಣವೊಂದರಲ್ಲಿ ಇತ್ಯರ್ಥವಾಗದೆ ಡಿಯೋ ದ್ವಿಚಕ್ರ ವಾಹನವೊಂದನ್ನು ನಗರದ ಉತ್ತರ ಪೊಲೀಸ್ ಠಾಣೆಯಲ್ಲೇ ಇಡಲಾಗಿತ್ತು. ಆದರೆ ಇದೀಗ ಇದೇ ವಾಹನದ‌ ಸಂಖ್ಯೆ KA 19 HD 6497 ಅನ್ನು ಖದೀಮನೋರ್ವ ನಕಲು ಮಾಡಿಕೊಂಡು ತನ್ನ ಹೋಂಡಾ ಆ್ಯಕ್ಟಿವಾ ಸ್ಕೂಟಿಗೆ ಅಳವಡಿಸಿದ್ದಾನೆ ಎಂದು ತಿಳಿದು ಬಂದಿದೆ‌. ಈ ಸ್ಕೂಟಿಯು ಮಂಗಳೂರು ನಗರದಲ್ಲಿ ಸುತ್ತಾಡುತ್ತಿರುವ ಅನುಮಾನ ಮೂಡಿದೆ.

ಅಲ್ಲದೇ, ಆರೋಪಿಯು ನಗರದ ಸಿಟಿ ಸೆಂಟರ್ ಮಾಲ್​ನ ಪಾರ್ಕಿಂಗ್ ಸ್ಥಳದಲ್ಲಿದ್ದ 2 ವಾಹನಗಳ ಹೆಲ್ಮೆಟ್ ಕಳವು ಮಾಡಿರುವ ಬಗ್ಗೆಯೂ ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆಯಾಗಿದೆ. ಈ ಆರೋಪಿಯ ಸುಳಿವು ಸಿಕ್ಕರೆ ತಕ್ಷಣ ಮಂಗಳೂರು ಉತ್ತರ ಪೊಲೀಸ್ ಠಾಣೆಯ 0824-2220516, 9480805338 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಲು ವಿನಂತಿಸಿದ್ದಾರೆ.

ಇದನ್ನೂ ಓದಿ:ನಂದಿನಿ ತುಪ್ಪ ಕಲಬೆರಕೆ ಪ್ರಕರಣ: ಬೆಂಗಳೂರಿನ‌ ಸಗಟು ಮಾರಾಟ ಏಜೆನ್ಸಿ ವಿರುದ್ಧ ಎಫ್ಐಆರ್

ABOUT THE AUTHOR

...view details