ಮಂಗಳೂರು: ಆನ್ಲೈನ್ ಲೋನ್ ಅವರ ಕರೆ ಬಂದರೆ ಸತ್ತಿದ್ದಾನೆ ಎಂದು ಹೇಳಿ ಎಂದು ಸಾಲ ಪಡೆದುಕೊಂಡಿದ್ದ ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಮಂಗಳೂರಿನ ಕಿನ್ನಿಗೋಳಿಯ ಸುಶಾಂತ್ (26) ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಕುಳಾಯಿ ಸನ್ರೈಸ್ ಕಾರ್ಪೊರೇಶನ್ನಲ್ಲಿ ಕೆಲಸ ಮಾಡುತ್ತಿದ್ದ ಈತ ತಮ್ಮ ಕಚೇರಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಗಳೂರಲ್ಲಿ ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ 15 ವರ್ಷಗಳ ಹಿಂದೆ ತಂದೆ-ತಾಯಿಯನ್ನು ಕಳೆದುಕೊಂಡ ಇವರಿಗೆ ಅಶ್ವಿತ್ ಎಂಬ ಅಣ್ಣನಿದ್ದಾರೆ. ಸುಶಾಂತ್ ಕನ್ನಡ ಲಿಪಿಯಲ್ಲಿ ತುಳು ಭಾಷೆಯ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ " Sorry ಎಲ್ಲರಿಗೂ, ನನಗೆ ಯಾರ ವಿಶ್ವಾಸ ಉಳಿಸಲು ಆಗಲಿಲ್ಲ. ಹಣದ ವಿಷಯದಲ್ಲಿ ತೊಂದರೆ ಆಗಿದೆ. Sorry Online loan ನವರು ಕಾಲ್ ಮಾಡಿದರೆ ಸತ್ತು ಹೋಗಿದ್ದಾನೆ ಎಂದು ಹೇಳಿ. Really sorry for all" ಎಂದು ಬರೆದಿದ್ದಾರೆ.
ಕರಾವಳಿಯಲ್ಲಿ 2ನೇ ಘಟನೆ: ಆನ್ಲೈನ್ ಲೋನ್ ಪಡೆದು ಅದನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದು ಜಿಲ್ಲೆಯಲ್ಲಿ ನಡೆದ 2ನೇ ಘಟನೆ ಆಗಿದೆ.
ಓದಿ:ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರೇಣುಕಾಚಾರ್ಯ ಭಾಗಿ.. ಕೋವಿಡ್ ನಿಯಮ ಧೂಳಿಪಟ!