ಕರ್ನಾಟಕ

karnataka

ETV Bharat / state

ರಾಮಮಂದಿರ ಭೂಮಿ ಪೂಜೆ ದಿನವನ್ನು ಐತಿಹಾಸಿಕ ದಿನವಾಗಿಸಿ: ವಿಹೆಚ್​ಪಿ ಕರೆ

ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ರಾಮ ಮಂದಿರ ನಿರ್ಮಾಣ ಭೂಮಿ ಪೂಜೆ ನಡೆಯಲಿದ್ದು, ನಾಡಿನಾದ್ಯಂತ ಇದನ್ನು ಸಂಭ್ರಮಿಸಬೇಕು. ಕರಾವಳಿಯ ಎಲ್ಲಾ ಮಠ-ಮಂದಿರ, ದೇವಸ್ಥಾನ, ಭಜನಾ ಮಂದಿರಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಭಜನೆ, ಸಂಕೀರ್ತನೆ, ಪೂಜೆ, ಜಪ-ತಪ ಮಾಡಿ ಶ್ರೀರಾಮಚಂದ್ರ ಪ್ರಭುವನ್ನು ಆರಾಧಿಸಬೇಕು ಎಂದು ವಿಎಚ್​ಪಿ ಮನವಿ ಮಾಡಿತು.

dsdsd
ರಾಮಮಂದಿರ ಭೂಮಿ ಪೂಜೆ ದಿನವನ್ನು ಐತಿಹಾಸಿಕ ದಿನವಾಗಿಸಿ:ವಿಹೆಚ್​ಪಿ ಕರೆ

By

Published : Jul 30, 2020, 9:03 PM IST

ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶತ ಶತಮಾನಗಳ ಹಿಂದೂಗಳ, ರಾಮ ಭಕ್ತರ ಕನಸಾಗಿದೆ. ಆ ಐತಿಹಾಸಿಕ ದಿನವನ್ನು ಮನೆ ಮನೆಗಳಲ್ಲಿ ಧ್ವಜ, ತಳಿರು ತೋರಣಗಳಿಂದ ಸಿಂಗರಿಸಿ ದೀಪಗಳನ್ನ ಹಚ್ಚಿ ದೀಪೋತ್ಸವದ ರೀತಿಯಲ್ಲಿ ಆಚರಿಸಲು ರಾಜ್ಯದ ಜನತೆಗೆ ವಿಎಚ್​ಪಿ ಕರೆ ನೀಡಿದೆ.

ರಾಮಮಂದಿರ ಭೂಮಿ ಪೂಜೆ ದಿನವನ್ನು ಐತಿಹಾಸಿಕ ದಿನವಾಗಿಸಿ:ವಿಹೆಚ್​ಪಿ ಕರೆ

ಈ ಬಗ್ಗೆ ವಿಎಚ್​ಪಿ ವಿಭಾಗ ಕಾರ್ಯದರ್ಶಿ ಶರಣ್ ಪಂಪ್​ವೆಲ್ ಮಾತನಾಡಿ, ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ವಿಎಚ್​ಪಿಯ ಎಲ್ಲ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ 1990 ಹಾಗೂ 1992 ರಲ್ಲಿ ರಾಮಜನ್ಮ ಭೂಮಿ ಹೋರಾಟಕ್ಕೆ ಕರ ಸೇವಕರಾಗಿದ್ದವರ ಜೊತೆಯಲ್ಲಿ ವಿಶೇಷ ನೇರ ಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಆದ್ದರಿಂದ ಕರಾವಳಿ ಭಾಗದ ಮಂಗಳೂರು, ಉಡುಪಿ, ಪುತ್ತೂರು, ಕಾಸರಗೋಡು ವಿಎಚ್​ಪಿ ಕಾರ್ಯಾಲಯಗಳಲ್ಲಿ ನೇರ ಪ್ರಸಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದಿದ್ದಾರೆ. ಇದರ ಜತೆಗೆ ಆಗಸ್ಟ್​ 5ರಂದು ನಡೆಯಲಿರುವ ಅಯೋಧ್ಯೆ ಭೂಮಿ ಪೂಜೆಯ ದಿನವನ್ನ ಐತಿಹಾಸಿಕವಾಗಿಸಬೇಕು ಎಂದು ತಿಳಿಸಿದರು.

ABOUT THE AUTHOR

...view details