ಕರ್ನಾಟಕ

karnataka

ETV Bharat / state

ಮಂಗಳೂರು: ಹೋಂ ಸರ್ವೀಸ್​ ಮೇಲೂ ಲಾಕ್​ಡೌನ್​ ಪರಿಣಾಮ

ಮನೆಯ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟು ಹೋದರೆ ಅದನ್ನು ಸರಿಪಡಿಸಲು ಮನೆಗೆ ಬಂದು ಸೇವೆ ನೀಡುವವರು ಕೊರೊನಾ ಹಾವಳಿ ಸಂದರ್ಭದಲ್ಲಿ ಭಯದಿಂದಲೇ ಸೇವೆ ಸಲ್ಲಿಸುತ್ತಿದ್ದರು. ಆದ್ರೆ ಜನತಾ ಕರ್ಫ್ಯೂ, ಲಾಕ್​​ಡೌನ್ ಬಳಿಕ ಹೋಮ್​ ಸರ್ವೀಸ್​ ಕೂಡ ಬಂದ್ ಆಗಿದೆ.

lock down effects on home service
ಹೋಂ ಸರ್ವೀಸ್​ ಮೇಲೆ ಲಾಕ್​ಡೌನ್​ ಎಫೆಕ್ಟ್​​

By

Published : May 12, 2021, 10:22 AM IST

Updated : May 12, 2021, 11:39 AM IST

ಮಂಗಳೂರು:ಕೋವಿಡ್​ ಆರ್ಭಟ ಜೋರಾಗಿ ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ. ಕೋವಿಡ್​ ತಡೆಗೆ ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಗೊಳಿಸಿ ಇದೀಗ ಲಾಕ್​ಡೌನ್​ ಜಾರಿಯಲ್ಲಿದೆ. ಅನೇಕ ಉದ್ಯಮಗಳ ಮೇಲೆ ಕೋವಿಡ್​ ತನ್ನ ಪರಿಣಾಮ ಬೀರಿದೆ. ಇದೀಗ ಮಂಗಳೂರಿನಲ್ಲಿ ಹೋಂ ಸರ್ವೀಸ್ ಸೇವೆ ಕೂಡ ಸ್ಥಗಿತಗೊಂಡಿದೆ.

ಕೋವಿಡ್​ ಭೀತಿ ಜೋರಾಗಿದೆ. ಜನರು ಮತ್ತೊಬ್ಬರತ್ತ ಸುಳಿಯಲು ಭಯ ಪಡುವಂತಾಗಿದೆ. ಮನೆಯ ಎಲೆಕ್ಟ್ರಾನಿಕ್ ವಸ್ತುಗಳು ಕೆಟ್ಟು ಹೋದರೆ ಅದನ್ನು ಸರಿಪಡಿಸಲು ಮನೆಗೆ ಬಂದು ಸೇವೆ ನೀಡುವವರು ಕೊರೊನಾ ಹಾವಳಿ ಸಂದರ್ಭದಲ್ಲಿ ಭಯದಿಂದಲೇ ಸೇವೆ ಸಲ್ಲಿಸುತ್ತಿದ್ದರು. ಆದ್ರೆ ಜನತಾ ಕರ್ಫ್ಯೂ, ಲಾಕ್​​ಡೌನ್ ಬಳಿಕ ಹೋಮ್​ ಸರ್ವೀಸ್​ ಕೂಡ ಬಂದ್ ಆಗಿದೆ.

ಹೋಂ ಸರ್ವೀಸ್​ ಮೇಲೆ ಲಾಕ್​ಡೌನ್​ ಎಫೆಕ್ಟ್​​ - ಮಂಗಳೂರು ನಿವಾಸಿ ಪ್ರತಿಕ್ರಿಯೆ

ಮನೆಯಲ್ಲಿನ ಫ್ರಿಡ್ಜ್, ವಾಷಿಂಗ್ ಮಷಿನ್, ಎ.ಸಿ, ಮಿಕ್ಸರ್ ಗ್ರೈಂಡರ್, ಟಿವಿ, ಪಂಪ್ ಸೆಟ್ ಹೀಗೆ ಮೊದಲಾದ ಎಲೆಕ್ಟ್ರಾನಿಕ್​​ ಕೆಟ್ಟು ಹೋದರೆ ಆಯಾ ಕಂಪೆನಿಗಳ ಸೇವೆ ನೀಡುವ ಪ್ರತಿನಿಧಿಗಳು ಅಥವಾ ಮೆಕ್ಯಾನಿಕ್​ಗಳು ಬಂದು ಸರಿಪಡಿಸಿ ಹೋಗುತ್ತಿದ್ದರು. ಕೊರೊನಾ ಎರಡನೇ ಅಲೆ ವ್ಯಾಪಕವಾದ ಬಳಿಕ ಈ ಸೇವೆ ನೀಡುವವರು ಆತಂಕದಲ್ಲಿಯೇ ಹೋಂ ಸರ್ವಿಸ್ ನೀಡುತ್ತಿದ್ದರು. ಆದರೆ ಕೊರೊನಾ ಲಾಕ್​ಡೌನ್​ ಬಳಿಕ ಇದು ಕೂಡ ನಿಂತಿದೆ.

ಕೊರೊನಾ ಲಾ‌ಕ್​​ಡೌನ್ ಕಟ್ಟು ನಿಟ್ಟಿನಲ್ಲಿ ನಡೆಯುತ್ತಿರುವುದರಿಂದ ಜನರ ಓಡಾಟಕ್ಕೆ ಪೊಲೀಸರು ಅವಕಾಶ ನೀಡುತ್ತಿಲ್ಲ. ಇದರ ನಡುವೆ ಹೋಂ ಸರ್ವಿಸ್ ಸೇವೆ ನೀಡುವ ಉಸಾಬರಿ ಬೇಡವೆಂದು ಹಲವು ಮಂದಿ ದೂರವಾಣಿಗೂ ಲಭ್ಯರಾಗುತ್ತಿಲ್ಲ.

ಇದನ್ನೂ ಓದಿ:ಆಯುಷ್ಮಾನ್ ಭಾರತ ಯೋಜನೆಯಡಿ ಕೋವಿಡ್ ಚಿಕಿತ್ಸೆಗೆ ಅವಕಾಶ ನೀಡಿ: ಹೆಚ್​ಡಿಕೆ

ಇನ್ನೂ ಮನೆಗೆ ಅವಶ್ಯಕತೆ ಇರುವ ವಸ್ತುಗಳು ಕೆಟ್ಟು ಹೋಗುತ್ತಿರುವುದರಿಂದ ಅದನ್ನು ಸರಿಪಡಿಸಲಾಗದೆ ಹಲವರು ಸಂಕಷ್ಟದಲ್ಲಿದ್ದಾರೆ. ಒಟ್ಟಿನಲ್ಲಿ ಭೀತಿಯ ನಡುವೆ ಕಾರ್ಯಾಚರಿಸುತ್ತಿದ್ದ ಹೋಂ ಸರ್ವಿಸ್ ಸೇವೆ ಲಾಕ್ ಡೌನ್ ನಲ್ಲಿ ಸಂಪೂರ್ಣ ಲಾಕ್ ಆಗಿ ಜನರಿಗೆ ಸಂಕಷ್ಟ ತಂದಿದೆ.

Last Updated : May 12, 2021, 11:39 AM IST

ABOUT THE AUTHOR

...view details