ಮಂಗಳೂರು: ಪಿಎಫ್ಐ, ಎಸ್ಡಿಪಿಐ ಬಿಜೆಪಿಯ 'ಬಿ' ಟೀಂ ಆಗಿದ್ದು, ಅದನ್ನು ನಿಷೇಧ ಮಾಡಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪಿಎಫ್ಐ ಬಿಜೆಪಿಯ ಬಿ ಟೀಂ ಆಗಿದೆ. ಪಿಎಫ್ಐಗೆ ರ‍್ಯಾಲಿ ಮಾಡಲು ಬಿಜೆಪಿಯವರು ಅನುಮತಿ ಕೊಟ್ಟಿದ್ದಾರೆ. ಪಿಎಫ್ಐ,ಎಸ್ ಡಿಪಿಐ ರದ್ದು ಮಾಡಲಿ, ರದ್ದು ಮಾಡಲು ಸಾಕಷ್ಟು ಸಾಕ್ಷ್ಯಗಳಿವೆ. ಅದನ್ನು ಕೇಂದ್ರಕ್ಕೆ ಕಳುಹಿಸಿ ನಿಷೇಧ ಮಾಡಲಿ, ಎಸ್ಡಿಪಿಐಯನ್ನು ಬೆಳೆಸುತ್ತಿರುವುದೇ ಬಿಜೆಪಿ. ಅವರಿಗೆ ಅದನ್ನು ನಿಷೇಧ ಮಾಡಲು ತೊಂದರೆ ಏನು ಎಂದು ಪ್ರಶ್ನಿಸಿದರು.