ಉಳ್ಳಾಲ (ದಕ್ಷಿಣಕನ್ನಡ): ಈ ವರ್ಷ ಸಂಘಟನೆ ಮತ್ತು ಹೋರಾಟದ ವರ್ಷ ಎಂದು ಕೆಪಿಸಿಸಿ ಘೋಷಿಸಲಾಗಿದೆ ಅಂತಾ ಡಿಕೆ ಶಿವಕುಮಾರ್ ಹೇಳಿದರು.
ಮಂಗಳೂರು ವಿದಾನಸಭಾ ಕ್ಷೇತ್ರ ಕಾರ್ಯಕರ್ತರಿಗೆ ಅಂಬ್ಲಮೊಗರುವಿನಲ್ಲಿ ನಡೆದ ಕೃತಜ್ಞತಾ ಮತ್ತು ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರಮಟ್ಟದ ಸಮಸ್ಯೆ ಮುಂದಿಟ್ಟಕೊಂಡು ಹೋರಾಟ ನಡೆಸಲಾಗುವುದು. ಪಕ್ಷದ ಅಭ್ಯರ್ಥಿಗಳು ಸೋತಿರುವ 100 ರಿಂದ150 ಕ್ಷೇತ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ತಿಳಿಯಲು ನಿರ್ಧರಿಸಲಾಗಿದೆ. ಅದರಂತೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಧ್ವನಿ ಆದರೆ, ಕೆಪಿಸಿಸಿ ಬ್ಲಾಕ್ ಕಾಂಗ್ರೆಸ್ ಧ್ವನಿ ಆಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನ ಮತ ನೀಡಿ ಇಷ್ಟು ಶಾಸಕರನ್ನು ಆರಿಸಿದರೂ ನಿಮಗಾದ ಪ್ರಯೋಜನ ಏನು ಎಂದು ಇಲ್ಲಿನವರೇ ಆಗಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಅವರನ್ನು ಪ್ರಶ್ನಿಸಬೇಕು. ಕೊರೊನಾ ಸಂಕಷ್ಟ ಗಮನದಲ್ಲಿಟ್ಟುಕೊಂಡು ಎಲ್ಲ ರೀತಿಯ ತೆರಿಗೆ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.