ಮಂಗಳೂರು:ನಗರದ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್ ಬಳಿ ಹೊಂಚು ಹಾಕಿ ಬೈಕ್ ನಲ್ಲಿ ಹಿಂದಿನಿಂದ ಬಂದ ಮೂವರು ಅಪರಿಚಿತರು ಬಿಜೆಪಿ ಮುಖಂಡನ ಮೇಲೆ ತಲವಾರು ದಾಳಿಗೆ ಯತ್ನಿಸಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಕೊಣಾಜೆ ಗ್ರಾಪಂ ಮಾಜಿ ಸದಸ್ಯ ಪ್ರಕಾಶ್ ಶೆಟ್ಟಿ(41) ಎಂಬವರ ಮೇಲೆ ತಲವಾರ್ನಿಂದ ದಾಳಿ ನಡೆದಿದೆ. ಅವರ ಸಮಯ ಪ್ರಜ್ಞೆಯಿಂದ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ನಗರದ ಕೊಣಾಜೆಯ ಮಂಗಳೂರು ವಿವಿ ಕ್ಯಾಂಪಸ್ ನಲ್ಲಿರುವ ಹಾಸ್ಟೆಲ್ ಬಳಿಯ ದುರ್ಗಾ ಫ್ಯಾನ್ಸಿ & ಜನರಲ್ ಸ್ಟೋರ್ನ ಮಾಲೀಕರಾಗಿರುವ ಪ್ರಕಾಶ್ ಶೆಟ್ಟಿ ಅವರು ನಿನ್ನೆ ರಾತ್ರಿ 9.30ಕ್ಕೆ ತಮ್ಮ ಫ್ಯಾನ್ಸಿಯನ್ನು ಮುಚ್ಚಿ ಮನೆಗೆ ತೆರಳುತ್ತಿದ್ದರು. ಅದೇ ಸಮಯಕ್ಕೆ ಅವರು ತಮ್ಮ ಫ್ಯಾನ್ಸಿ ಮಳಿಗೆಯಿಂದ ಸ್ವಲ್ಪ ದೂರದಲ್ಲಿ ಕಪ್ಪು ಬಣ್ಣದ ಪಲ್ಸರ್ ಬೈಕಿನಲ್ಲಿ ಕುಳಿತಿದ್ದ ಮೂವರು ಯುವಕರನ್ನು ಗಮನಿಸಿದ್ದರು.