ಕರ್ನಾಟಕ

karnataka

ETV Bharat / state

ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅವಮಾನ ಆರೋಪ.. ಯುವಕನ ನಡೆಗೆ ಟೀಕೆ - ಯುವಕನೊಬ್ಬನಿಂದ ಕೊರಗಜ್ಜನ ಅಪಹಾಸ್ಯ

ವಿಡಿಯೋದಲ್ಲಿ ಕೊರಗಜ್ಜನ ವೇಷ ಧರಿಸಿದ ಯುವಕ ತನ್ನ ಸಂಗಡಿಗರ ಜೊತೆ ಕುಣಿಯುತ್ತಾ, ಹುಚ್ಚಾಟ ಪ್ರದರ್ಶಿಸಿ ತುಳುನಾಡಿನ ಆರಾಧ್ಯದೈವವನ್ನ ಅಪಹಾಸ್ಯ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋಗೆ ಅದೇ ಸಮುದಾಯದ ವ್ಯಕ್ತಿಯೊಬ್ಬರು ಟೀಕೆ ವ್ಯಕ್ತಪಡಿಸಿದ್ದಾರೆ..

insult
ತುಳುನಾಡಿನ ಆರಾಧ್ಯ ದೈವ

By

Published : Jan 7, 2022, 5:48 PM IST

ಪುತ್ತೂರು :ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು ಗ್ರಾಮದಲ್ಲಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅವಮಾನ ಮಾಡಿದ ಆರೋಪ ಕೇಳಿ ಬಂದಿದೆ.

ಕೊಳ್ನಾಡು ಗ್ರಾಮದಲ್ಲಿ ಒಂದು ಕೋಮಿನ ಯುವಕನೊಬ್ಬ ತನ್ನ ಮದುವೆಯ ಬಳಿಕ ವಧುವಿನ ಮನೆಗೆ ಆಗಮಿಸುವ ವೇಳೆ ಆರಾಧ್ಯ ದೈವ ಕೊರಗಜ್ಜನ ವೇಷ ಧರಿಸಿ ಕುಣಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ತುಳುನಾಡಿನ ಆರಾಧ್ಯ ದೈವ ಕೊರಗಜ್ಜನಿಗೆ ಅವಮಾನ ಆರೋಪ

ವಿಡಿಯೋದಲ್ಲಿ ಕೊರಗಜ್ಜನ ವೇಷ ಧರಿಸಿದ ಯುವಕ ತನ್ನ ಸಂಗಡಿಗರ ಜೊತೆ ಕುಣಿಯುತ್ತಾ, ಹುಚ್ಚಾಟ ಪ್ರದರ್ಶಿಸಿ ತುಳುನಾಡಿನ ಆರಾಧ್ಯದೈವವನ್ನ ಅಪಹಾಸ್ಯ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ವಿಡಿಯೋಗೆ ಅದೇ ಸಮುದಾಯದ ವ್ಯಕ್ತಿಯೊಬ್ಬರು ಟೀಕೆ ವ್ಯಕ್ತಪಡಿಸಿದ್ದಾರೆ.

ಇದಲ್ಲದೇ ಯುವಕನ ಹುಚ್ಚಾಟದ ವೇಳೆ ದಲಿತ ಸಮುದಾಯಕ್ಕೂ ಅವಮಾನ ಮಾಡುವ ರೀತಿ ವರ್ತಿಸಲಾಗಿದೆ ಎಂದು‌ ದಲಿತ ಸೇವಾ ಸಮಿತಿ ಆರೋಪಿಸಿದೆ. ಇದರಿಂದ ಯುವಕನ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಇದನ್ನೂ ಓದಿ:ಬೆಂಗಳೂರಿನಿಂದ ಮೇಕೆದಾಟುವರೆಗೆ ವಾಹನಗಳ ಜಾಥಾ : ನಾವು ಶೋ ಮಾಡಲು ಹೊರಟಿಲ್ಲ ಎಂದ ವಾಟಾಳ್ ನಾಗರಾಜ್​

ABOUT THE AUTHOR

...view details