ಹೊಸ ವಾಹನಗಳ ಖರೀದಿ ಹೆಚ್ಚಳ ...ಚೇತರಿಕೆಯತ್ತ ಉದ್ಯಮ...
ಕೊರೊನಾ ಸಂಕಷ್ಟದ ನಡುವೆ ವಿವಿಧ ರಂಗದ ವ್ಯಾಪಾರ- ವಹಿವಾಟಿನ ಮೇಲೆ ದುಷ್ಪರಿಣಾಮ ಬೀರಿದೆ. ಆದರೆ, ಇದಕ್ಕೆ ತೀರಾ ವ್ಯತಿರಿಕ್ತವಾಗಿ ನವರಾತ್ರಿ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹೆಚ್ಚು ವಾಹನಗಳ ಖರೀದಿ ನಡೆದಿದೆ.
ಹೊಸ ವಾಹನಗಳ ಖರೀದಿ
ಮಂಗಳೂರು: ಕೊರೊನಾ ಸಂಕಷ್ಟದ ನಡುವೆ ಮುಗ್ಗರಿಸಿಬಿದ್ದಿದ್ದ ವ್ಯಾಪಾರ-ವಹಿವಾಟು ಮತ್ತೆ ಚೇತರಿಸಿಕೊಳ್ಳುತ್ತಿದೆ. ವಾಹನಗಳ ಖರೀದಿಗೂ ಕೊರೊನಾ ಸಂಕಷ್ಟದ ನಡುವೆ ಹೊಡೆತ ಬಿದ್ದಿದ್ದು, ಇದೀಗ ಮತ್ತೆ ಚೇತರಿಕೆ ಕಂಡಿದೆ. ಅದರಲ್ಲಿಯೂ ನವರಾತ್ರಿ ಸಂದರ್ಭದಲ್ಲಿ ಹೊಸ ವಾಹನಗಳ ಖರೀದಿಗೆ ಗ್ರಾಹಕರು ಹೆಚ್ಚಿನ ಉತ್ಸಾಹ ತೋರಿದ್ದಾರೆ.
ಈ ಕುರಿತು ಮಾತನಾಡಿದ ಮಂಗಳೂರಿನ ಕಾಂಚನ ಹುಂಡೈ ಶೋ ರೂಂ ಮುಖ್ಯಸ್ಥ ಗಣಪತಿ, ನವರಾತ್ರಿ ಸಂದರ್ಭದಲ್ಲಿ ಕಾರು ಖರೀದಿ ಮೇಲೆ ಕೊರೊನಾ ಪರಿಣಾಮ ಬಿದ್ದಿಲ್ಲ. ಕಳೆದ ನವರಾತ್ರಿ ಸಂದರ್ಭದಲ್ಲಿ 110 ಕಾರು ಮಾರಾಟ ಮಾಡಲಾಗಿತ್ತು. ಈ ಬಾರಿ 120 ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ತಿಳಿಸಿದ್ದಾರೆ.