ಕರ್ನಾಟಕ

karnataka

ETV Bharat / state

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ; ಗಾಂಜಾ ಸೇವಿಸುತ್ತಿದ್ದ ಆರೋಪಿಗಳ ಬಂಧನ - Mangaluru latest news

ಮಂಗಳೂರಿನಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಏಳು ಜನರನ್ನು ಬಂಧಿಸಿ ಅವರಿಂದ 500 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

illegally ganja consumption; 7 arrested
ಗಾಂಜಾ ಸೇವನೆ ಮಾಡುತ್ತಿದ್ದ 7 ಆರೋಪಿಗಳ ಬಂಧನ

By

Published : Sep 29, 2020, 11:34 PM IST

ಮಂಗಳೂರು :ಮಂಗಳೂರಿನ ವಿವಿಧೆಡೆ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಹಿನ್ನೆಲೆ ಏಳು ಮಂದಿಯನ್ನು ಇಲ್ಲಿನ ಅಬಕಾರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಈ ವೇಳೆ 500 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಮಂಗಳೂರಿನ ಆಲಿಸ್ಟರ್, ಪ್ರಥಮ್ ಶೆಟ್ಟಿ, ಪ್ರಥಮ್ ದೇವಾಡಿಗ, ವಿಶ್ವಾಸ್, ಮಂಜುನಾಥ್, ಚಿರಾಗ್ ಮತ್ತು ಕ್ರಿಸ್ ಬಂಧಿತರು. ದ.ಕ ಜಿಲ್ಲಾ ಅಬಕಾರಿ ಅಧೀಕ್ಷಕಿ ಶೈಲಜಾ ಎ ಕೋಟೆ ನಿರ್ದೇಶನದಂತೆ ಮಂಗಳೂರು ವಿಭಾಗದ ಅಬಕಾರಿ ಅಧೀಕ್ಷಕ ವಿನೋದ್ ಕುಮಾರ್ ಮಾರ್ಗದರ್ಶನದಲ್ಲಿ ಹಾಗೂ ಅಬಕಾರಿ ಉಪನಿರೀಕ್ಷಕಿ ಸೀಮಾ ಮರಿಯಾ ಸುವಾರೀಸ್, ಅಬಕಾರಿ ಉಪನಿರೀಕ್ಷಕರಾದ ಪ್ರತಿಭಾ ಜಿ, ಕಮಲಾ ಹೆಚ್​ ಎನ್, ಹಾಗೂ ಸಿಬ್ಬಂದಿ ಸಂತೋಷ್ ಕುಮಾರ್, ಸುನೀಲ್, ಉಮೇಶ್ ಎಚ್, ಸಂದೀಪ್ ಕುಮಾರ್ ಮತ್ತು ಮನಮೋಹನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details