ಕರ್ನಾಟಕ

karnataka

ETV Bharat / state

ಪೆಟ್ರೋಲಿಯಂ ಉತ್ಪನ್ನ ಅಕ್ರಮ ದಾಸ್ತಾನು.. 12.5 ಲಕ್ಷ ರೂ ಮೌಲ್ಯದ ಸ್ವತ್ತು ಜಪ್ತಿ

ಪರವಾನಗಿ ಇಲ್ಲದೇ ಅಕ್ರಮವಾಗಿ ದಾಸ್ತಾನು ಮಾಡಿದ್ದ 15 ಸಾವಿರ ಲೀಟರ್ ಪೆಟ್ರೋಲಿಯಂ ಉತ್ಪನ್ನವನ್ನು ಕಂಕನಾಡಿ ಪೊಲೀಸರು ಜಪ್ತಿ ಮಾಡಿದ್ದಾರೆ.

ಯಮುನಾ ಅರ್ಥ್ ಮೂವರ್ಸ್
ಯಮುನಾ ಅರ್ಥ್ ಮೂವರ್ಸ್

By

Published : Sep 17, 2021, 8:03 AM IST

ಮಂಗಳೂರು: ಯಾವುದೇ ಪರವಾನಗಿ ಇಲ್ಲದೇ 15 ಸಾವಿರ ಲೀಟರ್​​ ಪೆಟ್ರೋಲಿಯಂ ಉತ್ಪನ್ನವನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮರೋಳಿಯ ಶೆಡ್​ವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ, 12.5 ಲಕ್ಷ ರೂ. ಮೌಲ್ಯದ ಪೆಟ್ರೋಲಿಯಂ ಉತ್ಪನ್ನವನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಮರೋಳಿಯಲ್ಲಿರುವ ಯಮುನಾ ಅರ್ಥ್ ಮೂವರ್ಸ್ ಎಂಬ ಶೆಡ್​​ವೊಂದರಲ್ಲಿ 15 ಸಾವಿರ ಲೀಟರ್​​ ಪೆಟ್ರೋಲಿಯಂ ಉತ್ಪನ್ನಗಳನ್ನು ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ದೊರೆತ ಕಂಕನಾಡಿ ಠಾಣಾ ಪೊಲೀಸರು, ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 15 ಸಾವಿರ ಲೀ. ಪೆಟ್ರೋಲಿಯಂ ಉತ್ಪನ್ನ ಪತ್ತೆಯಾಗಿದೆ. ತಕ್ಷಣ ಪೊಲೀಸರು ಟ್ಯಾಂಕರ್ ಸಹಿತ ಪೆಟ್ರೋಲಿಯಂ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಒಟ್ಟು ಮೌಲ್ಯ 12.5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ದಾಸ್ತಾನು ಇರಿಸಿರುವ ಈ ಪೆಟ್ರೋಲಿಯಂ ಉತ್ಪನ್ನಗಳಿಗೆ ಯಾವುದೇ ಪರವಾನಗಿ ಹಾಗೂ ದಾಖಲೆಗಳು ಲಭ್ಯವಾಗಿಲ್ಲ. ಆದ್ದರಿಂದ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆಗೊಳಪಡಿಸಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಯಮುನ ಅರ್ಥ್ ಮೂವರ್ಸ್​​ನ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿ ಐಸ್ ಕ್ಯೂಬ್ ಪಬ್ ಗಲಾಟೆ ಪ್ರಕರಣ: ಐವರ ಬಂಧನ

ABOUT THE AUTHOR

...view details