ಕರ್ನಾಟಕ

karnataka

ETV Bharat / state

ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್​ ಅಳವಡಿಕೆ ಸರ್ಕಾರದ ಆದೇಶದಂತೆ ಶುಲ್ಕ ಆನ್​ಲೈನ್​ ಪಾವತಿ - ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್

ವಾಹನಗಳಿಗೆ ಅಳವಡಿಸಬೇಕಾಗಿರುವ ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್ ಪ್ಲೇಟ್/ಅತಿ ಸುರಕ್ಷತಾ ನೋಂದಣಿ ಫಲಕದ ಅಳವಡಿಕೆ ಗಡುವನ್ನು ಮುಂದಿನ 3 ತಿಂಗಳಿಗೆ ವಿಸ್ತರಿಸಿದೆ.

High security registration plate
ಹೈ ಸೆಕ್ಯುರಿಟಿ ರೆಜಿಸ್ಟ್ರೇಷನ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆ

By ETV Bharat Karnataka Team

Published : Nov 18, 2023, 7:13 AM IST

ಸುಳ್ಯ(ದಕ್ಷಿಣ ಕನ್ನಡ):ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ವಾಹನಗಳಿಗೆ ಅಳವಡಿಸಬೇಕಿದ್ದ ಅತಿ ಸುರಕ್ಷತಾ ನೋಂದಣಿ ಫಲಕ ಅಥವಾ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಗಡುವನ್ನು 3 ತಿಂಗಳ‌ ಮಟ್ಟಿಗೆ ವಿಸ್ತರಣೆ ಮಾಡಿ ಸರ್ಕಾರವು ಇತ್ತೀಚೆಗೆ ಆದೇಶ ಹೊರಡಿಸಿತ್ತು.

ಈಗಾಗಲೇ 2023 ನವೆಂಬರ್ 17ಕ್ಕೆ ಅಂತ್ಯವಾಗಬೇಕಿದ್ದ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಅವಧಿಯನ್ನು ಇದೀಗ ಮೂರು ತಿಂಗಳು ಹೆಚ್ಚುವರಿಯಾಗಿ ವಿಸ್ತರಿಸಿ 2024 ಫೆಬ್ರವರಿ 17ರ ವರೆಗೆ ಸರ್ಕಾರ ವಿಸ್ತರಣೆ ಮಾಡಿದೆ. ಈ ಕುರಿತು ಸಚಿವ ರಾಮಲಿಂಗಾ ರೆಡ್ಡಿ ಸೇರಿದಂತೆ ಸ್ಥಳೀಯ ಆರ್‌ಟಿಓ ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ. ಹೆಚ್ಚುವರಿಯಾಗಿ 90 ದಿನಗಳ ಕಾಲಾವಕಾಶವನ್ನು ಸರ್ಕಾರವು ಕಲ್ಪಿಸಿದ್ದು, ಈ ನಡುವೆ ಕಡ್ಡಾಯವಾಗಿ ವಾಹನ ಮಾಲಕರು ಆದಷ್ಟು ಬೇಗ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸರ್ಕಾರದ ಅಧಿಸೂಚನೆ ಸಂಖ್ಯೆ: TD 193 TDO 2021 ದಿನಾಂಕ-17-08-2023 ರ ಪ್ರಕಾರ 2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ವಾಹನಗಳು ಈ ನಂಬರ್ ಪ್ಲೇಟ್​ನ್ನು ಕಡ್ಡಾಯವಾಗಿ ಅಳವಡಿಸಬೇಕಾಗಿದೆ. ಆದರೆ ಇದೀಗ ಮುಂದೂಡಿದ 90 ದಿನಗಳಲ್ಲಿ ಕಡ್ಡಾಯವಾಗಿ ಇಂತಹ ವಾಹನಗಳಲ್ಲಿ ಎಚ್‌ಎಸ್‌ಆರ್‌ಪಿ ಫಲಕ ಅಳವಡಿಸಬೇಕು ಎಂದು ರಾಜ್ಯ ಸರ್ಕಾರದ ಅಧಿಸೂಚನೆ ಸಂಖ್ಯೆ TD 193 TDO 2021 DO:16-11-2023 ರ ಪ್ರಕಾರ ಆದೇಶ ಹೊರಡಿಸಿದೆ.

ಉಳಿದಂತೆ ದಿನಾಂಕ 17-8-2023ರ ಅಧಿಸೂಚನೆಯಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ. ಈ ಹಿಂದೆಯೇ ಈ ಆದೇಶ ಇದ್ದರೂ ಸಾರ್ವಜನಿಕರಿಗೆ ಮಾಹಿತಿ ಕೊರತೆ ಮತ್ತು ಕೆಲವು ಗೊಂದಲಗಳು ಇರುವ ಹಿನ್ನೆಲೆಯಲ್ಲಿ ನವೆಂಬರ್ 17, 2023 ಕೊನೆಯ ದಿನಾಂಕ ಎಂದು ನಿಗದಿ ಮಾಡಲಾಗಿತ್ತು. ಇದೀಗ ಮೂರು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದ್ದು, ಈ ಬಗ್ಗೆ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕ್ರಮ ವಹಿಸುವಂತೆ ರಾಜ್ಯದ ಎಲ್ಲಾ ಉಪಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಮತ್ತು ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ನೋಂದಣಿ ಪ್ರಾಧಿಕಾರಗಳಿಗೆ, ಆಯುಕ್ತರು ಸಾರಿಗೆ ಮತ್ತು ರಸ್ತೆ ಸುರಕ್ಷತೆ, ಬೆಂಗಳೂರು ಇವರು ಸೂಚನೆ ನೀಡಿದ್ದಾರೆ.

ಹೆಚ್ಚುವರಿ ಹಣ ವಸೂಲಿ ಆರೋಪ:ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್​ ಅಳವಡಿಕೆ ಸಮಯದಲ್ಲಿ ಸರ್ಕಾರವು ನಿಗದಿಪಡಿಸಿದ ಮೊತ್ತದ ಹಣ ಮಾತ್ರ ಆನ್​ಲೈನ್​ ಮೂಲಕ ಪಾವತಿ ಮಾಡಲು ಅವಕಾಶ ಇದೆ. ಆದರೆ ಕೆಲವು ವಾಹನ ಮಾರಾಟಗಾರರು ಗ್ರಾಹಕರಿಂದ ಹೆಚ್ಚುವರಿಯಾಗಿ ಹಣ ಪಡೆಯುತ್ತಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಪುತ್ತೂರು ಪ್ರಾದೇಶಿಕ ಸಾರಿಗೆ ಆಯುಕ್ತರಾದ ವಿಶ್ವನಾಥ್ ಅವರು ಈಗಾಗಲೇ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯನ್ನು ಸರ್ಕಾರದಿಂದ ನಿಗದಿಪಡಿಸಿದ ಅಧಿಕೃತ ಏಜೆನ್ಸಿಗಳು ಮಾಡುತ್ತಿವೆ ಎಂದಿದ್ದಾರೆ.

ಇದಕ್ಕೆ ಅವರು ನಿಗದಿಪಡಿಸಿದ ಮೊತ್ತವನ್ನು ಮಾತ್ರ ಆನ್​ಲೈನ್​ ಮೂಲಕ ಪಡೆಯುತ್ತಿದ್ದಾರೆ. ಇದರಲ್ಲಿ ಅಳವಡಿಕೆ ಶುಲ್ಕವೂ ಸೇರಿರುತ್ತದೆ. ಇದರ ಬದಲಾಗಿ ಹೆಚ್ಚುವರಿಯಾಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ಮಾಡುವ ಸಮಯದಲ್ಲಿ ಯಾವುದೇ ಶುಲ್ಕವನ್ನು ವಾಹನ ನಿರ್ಮಾಣ ಕಂಪನಿಗಳು ಅಥವಾ ಏಜೆನ್ಸಿಗಳು ಪಡೆಯುವಂತಿಲ್ಲ ಅವರು ತಿಳಿಸಿದ್ದಾರೆ.

ಈ ತರಹ ಪಡೆದರೆ ಗ್ರಾಹಕರು ಆಯಾ ವಾಹನಗಳ ನಿರ್ಮಾಣ ಕಂಪನಿಗಳ ದೂರು ವಿಭಾಗಕ್ಕೆ ಅಥವಾ ನಂಬರ್ ಪ್ಲೇಟ್ ನೊಂದಣಿ ಮಾಡುವ ಅಧಿಕೃತ ಏಜೆನ್ಸಿಗಳ ದೂರು ವಿಭಾಗಕ್ಕೆ ದೂರನ್ನು ನೀಡಬಹುದು. ಇದರ ವಿವರಗಳನ್ನು ಆಯಾ ವಾಹನಗಳ ಎಚ್‌ಎಸ್‌ಆರ್‌ಪಿ ನಂಬರ್ ನೊಂದಣೆ ಮಾಡುವಾಗ ಲಭ್ಯವಾಗುವ ರಶೀದಿಯಲ್ಲಿ ದೂರು ನೀಡಬಹುದಾದ ಫೋನ್ ನಂಬರ್‌ನೊಂದಿಗೆ ಸವಿವರವಾಗಿ ವಿವರಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಆಯುಕ್ತರು ವಿವರಿಸಿದರು.

ಇದನ್ನೂ ಓದಿ:ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ : ಏಕ ಸದಸ್ಯ ಪೀಠದ ಆದೇಶವನ್ನು ಅಮಾನತ್ತಿನಲ್ಲಿಟ್ಟ ಹೈಕೋರ್ಟ್

ABOUT THE AUTHOR

...view details