ಮಂಗಳೂರು:ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೆ ಹಳಿಯ ಮೇಲೆ ಗುಡ್ಡ ಕುಸಿತದಿಂದಾದ ಹಾನಿಯನ್ನು ಪಶ್ಚಿಮ ವಲಯ ರೈಲ್ವೆ ಮ್ಯಾನೇಜರ್ ಎ.ಕೆ.ಸಿಂಗ್, ಡಿಆರ್ಎಂ ಅಪರ್ಣಾ ಗಾರ್ಗ್ ಹಾಗೂ ಡಿವಿಜನಲ್ ಎಂಜಿನಿಯರ್ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗದಲ್ಲಿ ಗುಡ್ಡ ಕುಸಿತ: ಅಧಿಕಾರಿಗಳಿಂದ ಪರಿಶೀಲನೆ - ಮಂಗಳೂರು
ಸಕಲೇಶಪುರ-ಸುಬ್ರಹ್ಮಣ್ಯ ರೈಲ್ವೆ ಹಳಿಯ ಮೇಲೆ ಆಗಸ್ಟ್ 5ರಿಂದ ಸುಮಾರು 40 ಬಂಡೆ ಕುಸಿತದ ಪ್ರಕರಣಗಳು ವರದಿಯಾಗಿದ್ದು, ಪಶ್ಚಿಮ ವಲಯ ರೈಲ್ವೆ ಮ್ಯಾನೇಜರ್ ಎ.ಕೆ.ಸಿಂಗ್, ಡಿಆರ್ಎಂ ಅಪರ್ಣಾ ಗಾರ್ಗ್ ಹಾಗೂ ಡಿವಿಜನಲ್ ಎಂಜಿನಿಯರ್ ಜಂಟಿಯಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಗಸ್ಟ್ 5ರಿಂದ ರೈಲ್ವೆ ಹಳಿಗಳ ಮೇಲೆ ಬಂಡೆ ಕುಸಿತದ ಸುಮಾರು 40 ಪ್ರಕರಣಗಳು ವರದಿಯಾಗಿದ್ದು, ಈ ಮಣ್ಣು ತೆರವಿಗೆ ಸಾಕಷ್ಟು ಯಂತ್ರಗಳನ್ನು ಅಳವಡಿಸಲಾಗಿದೆ. ಮಳೆಯ ಪ್ರತಿಕೂಲ ವಾತಾವರಣದಲ್ಲೂ ರೈಲ್ವೆ ಸಿಬ್ಬಂದಿ ಹಾಗೂ ಹೊರಗುತ್ತಿಗೆ ಕಾರ್ಮಿಕರಿಂದ ರೈಲ್ವೆ ಹಳಿಗಳ ಕಾಮಗಾರಿಯನ್ನು ತ್ವರಿತವಾಗಿ ಮಾಡಿ ಮುಗಿಸಲು ಅವರು ಆದೇಶ ನೀಡಿದ್ದಾರೆ.
ಸಕಲೇಶಪುರದ ಸಮೀಪದ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ರೈಲ್ವೆ ಹಳಿಗಳು ಹಾನಿಗೊಳಗಾಗಿದ್ದು, ಇಲ್ಲಿ ನಿರಂತರವಾಗಿ ಕಾಮಗಾರಿ ನಡೆಯುತ್ತಿದೆ. ಆದಷ್ಟು ಬೇಗ ರೈಲು ಹಳಿಗಳನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಎ.ಕೆ.ಸಿಂಗ್ ಹೇಳಿದರು.