ಮಂಗಳೂರು: ಕೆಲವು ದಿನಗಳಿಂದ ಬಿಡುವು ಪಡೆದಿದ್ದ ಮಳೆ ಕರಾವಳಿಯಲ್ಲಿ ಮತ್ತೆ ಚುರುಕುಗೊಂಡಿದ್ದು, ನಿನ್ನೆಯಿಂದ ಮಂಗಳೂರಿನಲ್ಲಿ ಉತ್ತಮ ಮಳೆಯಾಗುತ್ತಿದೆ.
ಕರಾವಳಿಯಲ್ಲಿ ಭಾರೀ ಮಳೆ: ಮೀನುಗಾರಿಕೆ ಸ್ಥಗಿತ - Mangalore Rain News
ಮಂಗಳೂರು ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಬಿಡುವು ಪಡೆದಿದ್ದ ಮಳೆ ಮತ್ತೆ ಚುರುಕುಗೊಂಡಿದ್ದು, ನಿನ್ನೆಯಿಂದ ಉತ್ತಮ ಮಳೆಯಾಗಿದೆ.
ಕರಾವಳಿಯಲ್ಲಿ ಭಾರೀ ಮಳೆ: ಮೀನುಗಾರಿಕೆ ಸ್ಥಗಿತ
ಜಿಲ್ಲೆಯಲ್ಲಿ ನಿನ್ನೆಯಿಂದ ಇಡೀ ದಿನ, ರಾತ್ರಿ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಸಣ್ಣದಾಗಿ ನೆರೆ ಕೂಡ ಸೃಷ್ಟಿಯಾಗಿದೆ. ಮಂಗಳೂರಿನಲ್ಲಿ ನಿನ್ನೆ 1 ಸೆಂ.ಮೀ. ಮಳೆಯಾಗಿದೆ. ರಾತ್ರಿ ವೇಳೆಯೂ ನಿರಂತರವಾಗಿ ಮಳೆಯಾಗಿದ್ದು, ಭಾರತೀಯ ಹವಾಮಾನ ಇಲಾಖೆ ಕರಾವಳಿಯಲ್ಲಿ ಜು. 16ರಿಂದ 20ರವರೆಗೆ ಯೆಲ್ಲೊ ಅಲರ್ಟ್ ಘೋಷಿಸಿದೆ.
ಇಂದು ಬೆಳಗ್ಗೆಯಿಂದಲೇ ಮಳೆ ಮತ್ತೆ ಚುರುಕಾಗಿದ್ದು, ಮೀನುಗಾರಿಕಾ ಇಲಾಖೆ, ಕಡಲು ಪ್ರಕ್ಷುಬ್ಧವಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.