ಮಂಗಳೂರು: ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಸ್ಟಾಫ್ ನರ್ಸ್ ಹಾಗೂ ಅವರ 7 ವರ್ಷದ ಪುತ್ರನಿಗೆ ಕೋವಿಡ್ ಸೋಂಕು ಧೃಢಪಟ್ಟ ಹಿನ್ನೆಲೆ ಕೆಲ ಕಿಡಿಗೇಡಿಗಳು ಸಾಮಾಜಿಕ ಅಸಮಾನತೆ ಕಿರುಕುಳ ನೀಡುತ್ತಿದ್ದಾರೆ ಎಂದು ದ.ಕ. ಜಿಲ್ಲಾಧಿಕಾರಿಗೆ ದೂರು ಬಂದಿದೆ.
ಕೊರೊನಾ ತಗುಲಿರುವ ಸ್ಟಾಫ್ ನರ್ಸ್ಗೆ ಸಾಮಾಜಿಕ ಅಸಮಾನತೆಯ ಕಿರುಕುಳ.. ಜಿಲ್ಲಾಧಿಕಾರಿಗೆ ದೂರು - Wen Lock Kovid Hospital
ಕೊರೊನಾ ವಾರಿಯರ್ ಆಗಿ ದಿಟ್ಟ ಸೇವೆ ಸಲ್ಲಿಸಿರುವ ತಮಗೆ ಕೆಲವು ಕಿಡಿಗೇಡಿಗಳು ಇಲ್ಲಸಲ್ಲದ ಮಾತುಗಳನ್ನಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ..
ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸೋಂಕಿತೆ ಮೂಡುಬಿದಿರೆ ತಾಲೂಕಿನ ಶಿರ್ತಾಡಿಯಲ್ಲಿ ವಾಸಿಸುತ್ತಿದ್ದಾರೆ. ಕೊರೊನಾ ವಾರಿಯರ್ ಆಗಿ ದಿಟ್ಟ ಸೇವೆ ಸಲ್ಲಿಸಿರುವ ತಮಗೆ ಕೆಲವು ಕಿಡಿಗೇಡಿಗಳು ಇಲ್ಲಸಲ್ಲದ ಮಾತುಗಳನ್ನಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಇದರಿಂದ ಬೇಸತ್ತು ಸರ್ಕಾರಿ ಸೇವೆಗೆ ರಾಜೀನಾಮೆ ನೀಡುವ ಕುರಿತು ಯೋಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಪಾಸಿಟಿವ್ ಬಂದಿರುವ ಹಿನ್ನೆಲೆ ಸರ್ಕಾರದ ಎಲ್ಲ ನಿಯಮ ಪಾಲಿಸುತ್ತಿದ್ದೇವೆ. ಆದರೆ, ಕೆಲ ಕಿಡಿಗೇಡಿಗಳು ಸುಳ್ಳು ಆರೋಪ ಮತ್ತು ಅನಾಮಿಕ ದೂರುಗಳನ್ನು ನೀಡಿ ಬೆದರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದರಿಂದ ಮನನೊಂದಿರುವ ನಮಗೆ ಸೂಕ್ತ ರಕ್ಷಣೆ ಹಾಗೂ ಹಿಂದಿನ ಗೌರವ ಮರಳಿ ನೀಡಬೇಕೆಂದು ಜಿಲ್ಲಾಧಿಕಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.