ಕರ್ನಾಟಕ

karnataka

ETV Bharat / state

ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ ಹಿನ್ನೆಲೆ.. ಮೈದಾನದ ಬಳಿಯಿದ್ದ ಟೆಂಟ್ ನಿವಾಸಿಗಳ ತೆರವು

ಮುಂದಿನ ತಿಂಗಳು ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆ ಕಾರ್ಯಕ್ರಮ ನಡೆಯುವ ಮೈದಾನದ ಬಳಿ ಇದ್ದ ಟೆಂಟ್ ನಿವಾಸಿಗಳ ತೆರವು ಕಾರ್ಯ ಕೈಗೊಂಡ ಅಧಿಕಾರಿಗಳು ಅವರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಿಕೊಟ್ಟಿದ್ದಾರೆ.

Ground near tent residents Evacuation  PM Modi program in Mangalore  This September PM Modi visit to Mangaluru  PM Narendra Modi news  ಮಂಗಳೂರಿಗೆ ಪ್ರಧಾನಿ ಮೋದಿ ಭೇಟಿ  ಟೆಂಟ್ ನಿವಾಸಿಗಳ ತೆರವು  ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ  ಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನ
ಮೈದಾನದ ಬಳಿಯಿದ್ದ ಟೆಂಟ್ ನಿವಾಸಿಗಳ ತೆರವು

By

Published : Aug 29, 2022, 2:17 PM IST

ಮಂಗಳೂರು: ಸೆಪ್ಟಂಬರ್​ 2ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ಹಿನ್ನೆಲೆ ಕಾರ್ಯಕ್ರಮ ನಡೆಯುವ ಮೈದಾನದ ಬಳಿಯಿರುವ 30 ಕ್ಕೂ ಅಧಿಕ ಟೆಂಟ್ ನಿವಾಸಿಗಳನ್ನು ತೆರವುಗೊಳಿಸಲಾಗಿದೆ. ಕೂಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನ ಬಳಿ ಪ್ರಧಾನಿ ನರೇಂದ್ರ ಮೋದಿಯವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನೆಲೆ ಭದ್ರತಾ ಕಾರಣಗಳಿಗಾಗಿ ಪಾರ್ಕಿಂಗ್ ಮತ್ತು ಇತರ ಕಾರ್ಯಕ್ರಮ ಸಂಬಂಧಿತ ಅವಶ್ಯಕತೆಗಳಿಗಾಗಿ ಮೈದಾನದ ಬಳಿಯಿರುವ ಟೆಂಟ್​ ನಿವಾಸಿಗಳನ್ನು ತೆರವುಗೊಳಿಸಲಾಗಿದೆ.

ಮೈದಾನದ ಬಳಿಯಿದ್ದ ಟೆಂಟ್ ನಿವಾಸಿಗಳ ತೆರವು

ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಸ್ಥಳವನ್ನು ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಆ ಕಾರಣಕ್ಕಾಗಿ ಟೆಂಟ್ ಹಾಕಿ ವಾಸಿಸುತ್ತಿದ್ದವರನ್ನು ಪೊಲೀಸರು ಸ್ಥಳಾಂತರಗೊಳ್ಳಲು ಕೇಳಿಕೊಂಡಿದ್ದಾರೆ. ಅಲ್ಲಿದ್ದವರಿಗೆ ಸ್ಥಳೀಯ ಕಾರ್ಪೊರೇಟರ್ ನೆರವಿನಲ್ಲಿ ಮಂಗಳೂರು ಮಹಾನಗರ ಪಾಲಿಕೆಯಿಂದ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.

ತಹಶೀಲ್ದಾರ್ ಮತ್ತು ಇತರ ಕಾರ್ಮಿಕ ಇಲಾಖೆ ಸಿಬ್ಬಂದಿಯು ಊಟ ಸೇರಿದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಅವರನ್ನು ಭೇಟಿ ಮಾಡಲಿದ್ದಾರೆ. ಆ ಕುಟುಂಬಗಳೊಂದಿಗೆ ಚರ್ಚಿಸಿದ ನಂತರ ಅಲ್ಲಿ ನೆಲೆಸಲು ಅವರು ಆಸಕ್ತಿ ತೋರಿದರೆ ಅವರಿಗೆ ಶಾಶ್ವತ ಪುನರ್ವಸತಿ ಯೋಜನೆಯನ್ನೂ ಸಿದ್ಧಪಡಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಮೈದಾನದ ಬಳಿಯಿದ್ದ ಟೆಂಟ್ ನಿವಾಸಿಗಳ ತೆರವು

ಓದಿ:ಸೆಪ್ಟೆಂಬರ್ 2ರಂದು ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ ಭೇಟಿ

ABOUT THE AUTHOR

...view details