ಕರ್ನಾಟಕ

karnataka

ETV Bharat / state

ಪತ್ರಿಕಾ ರಂಗಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು : ಕನ್ಯಾಡಿ ಶ್ರೀ ಆಗ್ರಹ - ಪತ್ರಿಕಾ ರಂಗಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್

ಪತ್ರಕರ್ತರು, ದೃಶ್ಯ ಮಾಧ್ಯಮದವರು ಸೇರಿ ಒಟ್ಟು ಪತ್ರಿಕಾರಂಗ ಸಮಾಜ ಜಾಗೃತಿಗೊಳಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಪತ್ರಕರ್ತರು, ದೃಶ್ಯ ಮಾಧ್ಯಮದವರು ಸಂಕಷ್ಟದಲ್ಲಿದ್ದು, ಇವರಿಗೆ ಶಕ್ತಿ ತುಂಬುವ ಕಾರ್ಯ ಸರ್ಕಾರ ಮಾಡಬೇಕು..

Sri Brahmananda Saraswati Swamiji
ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ

By

Published : Sep 9, 2020, 3:18 PM IST

ಬೆಳ್ತಂಗಡಿ :ಪ್ರಸ್ತುತ ಮಹಾಮಾರಿ ಕೊರೊನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಅದರಲ್ಲಿಯೂ ವಿಶೇಷವಾಗಿ ಸಮಾಜದ ಒಳಿತಿಗಾಗಿ, ಕಟ್ಟಕಡೆಯ ಕುಟುಂಬದ ಅಭಿವೃದ್ಧಿಗಾಗಿ ಉತ್ತಮ ವರದಿ ಮಾಡುವ ಮೂಲಕ ಸೇವೆ ಮಾಡುವ ಪತ್ರಿಕಾರಂಗವೂ ಕೂಡ ಇಂದು ಆರ್ಥಿಕ ಸಂಕಷ್ಟಕ್ಕೊಳಗಾಗಿದೆ. ಹಾಗಾಗಿ, ಪತ್ರಿಕಾ ರಂಗಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ಪತ್ರಿಕಾ ರಂಗಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಲು ಕನ್ಯಾಡಿ ಶ್ರೀ ಒತ್ತಾಯ

ಕನ್ಯಾಡಿ ಶ್ರೀರಾಮ ಕ್ಷೇತ್ರದಲ್ಲಿ ತಮ್ಮ ಚಾರ್ತುಮಾಸ್ಯ ಸಂದರ್ಭದಲ್ಲಿ ವಿಶೇಷ ಸೇವೆ ಸಲ್ಲಿಸಿದ ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಸದಸ್ಯರನ್ನು ಗೌರವಿಸಿ ಆಶೀರ್ವಚನ ನೀಡಿದರು. ಬಳಿಕ ಮಾತನಾಡಿದ ಅವರು, ಹಿಂದೆ ಋಷಿಮುನಿಗಳು, ಸಂತರು, ಜ್ಞಾನಿಗಳು ಹಲವಾರು ಬರಹಗಳನ್ನು ತಮ್ಮ ತಪಸ್ಸು ಎಂಬಂತೆ ನೀಡಿದ ಫಲವಾಗಿ ಇಂದಿನ ಜನಾಂಗ ಅದರಿಂದ ಜ್ಞಾನ ಹೆಚ್ಚಿಸಿಕೊಳ್ಳುತ್ತಿದೆ.

ಇಂದು ಅದಕ್ಕೆ ಪೂರಕವಾಗಿ ಪತ್ರಕರ್ತರು, ದೃಶ್ಯ ಮಾಧ್ಯಮದವರು ಸೇರಿ ಒಟ್ಟು ಪತ್ರಿಕಾರಂಗ ಸಮಾಜ ಜಾಗೃತಿಗೊಳಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಪತ್ರಕರ್ತರು, ದೃಶ್ಯ ಮಾಧ್ಯಮದವರು ಸಂಕಷ್ಟದಲ್ಲಿದ್ದು, ಇವರಿಗೆ ಶಕ್ತಿ ತುಂಬುವ ಕಾರ್ಯ ಸರ್ಕಾರ ಮಾಡಬೇಕು ಎಂದರು. ಜಿಲ್ಲಾ ಪತ್ರರ್ಕರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ಶೈಕ್ಷಣಿಕ ಸೇವೆ, ಧಾರ್ಮಿಕ ಸಂದೇಶಗಳನ್ನು ನೀಡುವ ಜತೆಗೆ ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಕನ್ಯಾಡಿ ಶ್ರೀಗಳ ಸೇವೆ ಅಪಾರ. ಇವರ ಮಾರ್ಗದರ್ಶನದಿಂದ ನಮಗೆ ಇನ್ನಷ್ಟು ಕೆಲಸ ಮಾಡಲು ಶಕ್ತಿ ಬರುತ್ತೆ ಎಂದರು.

ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಸೇವೆ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಶ್ರೀಗಳ ತ್ಯಾಗದ ಮನೋಭಾವ ಇಡೀ ಬೆಳ್ತಂಗಡಿ ತಾಲೂಕನ್ನು ಜಗತ್ತು ಗುರುತಿಸುವಂತೆ ಮಾಡಿದೆ. ಇಂತಹ ತಾಲೂಕಿನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿರುವುದು ನಮ್ಮ ಹಿರಿಯರು ಮಾಡಿದ ಪುಣ್ಯದ ಫಲ ಎಂದರು.

ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಹಿಬ್ರಾಹಿಂ ಅಡ್ಕಸ್ಥಳ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞ, ಕಾರ್ಯದರ್ಶಿ ಮನೋಹರ್ ಬಳಂಜ, ಉಪಾಧ್ಯಕ್ಷ ದೀಪಕ್ ಅಠವಳೆ, ಪತ್ರಕರ್ತ ಬಿ ಎಸ್ ಕುಲಾಲ್, ಶಿಬಿ ಧರ್ಮಸ್ಥಳ, ಮಂಜುನಾಥ ರೈ, ಪುಷ್ಪರಾಜ ಶೆಟ್ಟಿ, ಅಚುಶ್ರೀ ಬಾಂಗೇರು, ಪದ್ಮನಾಭ ಕುಲಾಲ್, ಧನಕೀರ್ತಿ ಅರಿಗ, ಸಂಜೀವ ನೆರಿಯ, ಜಾರಪ್ಪ ಪೂಜಾರಿ, ಪ್ರಸಾದ್ ಶೆಟ್ಟಿ ಎಣಿಂಜೆ ಇವರನ್ನೆಲ್ಲ ಶ್ರೀಗಳು ಗೌರವಿಸಿದರು.

ABOUT THE AUTHOR

...view details