ಬಂಟ್ವಾಳ(ದ.ಕ.): ಬಡವರು ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕೇರಳದಲ್ಲಿ ಅಂಗನವಾಡಿ ಮೂಲಕ ಬಡವರಿಗೆ ಧರ್ಮಾರ್ಥ ನಿತ್ಯ ಪಡಿತರ ವಿತರಿಸುವಂತೆ ದಕ್ಷಿಣ ಕನ್ನಡದಲ್ಲಿಯೂ ಕ್ರಮಕೈಗೊಳ್ಳುವುದು ತುರ್ತು ಅಗತ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಕೇರಳ ಮಾದರಿ ಬಡವರಿಗೆ ಪ್ಯಾಕೇಜ್ ನೀಡಿ.. ಮಾಜಿ ಸಚಿವ ರಮಾನಾಥ ರೈ ಆಗ್ರಹ - Former minister Ramanatha Rai
ಕೇರಳದಲ್ಲಿ ಅಂಗನವಾಡಿ ಮೂಲಕ ಬಡವರಿಗೆ ಧರ್ಮಾರ್ಥ ನಿತ್ಯ ಪಡಿತರ ವಿತರಿಸುವಂತೆ ದಕ್ಷಿಣ ಕನ್ನಡದಲ್ಲಿಯೂ ಈ ರೀತಿಯ ಕ್ರಮ ಕೈಗೊಳ್ಳ ಬೇಕು ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆಗ್ರಹಿಸಿದ್ದಾರೆ.
ಮಾಜಿ ಸಚಿವ ಬಿ. ರಮಾನಾಥ ರೈ
ಬಂಟ್ವಾಳದಲ್ಲಿ ಮಾತನಾಡಿದ ಅವರು, ಕೇರಳ ಮಾದರಿ ಬಡವರಿಗೆ ಉಚಿತ ಪಡಿತರ ವಿತರಣೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಗೆ ನಮ್ಮ ಸಹಕಾರ ಇದೆ. ಅಕ್ಕಿಯ ಜೊತೆಗೆ ಎಲ್ಲಾ ದಿನ ಬಳಕೆಯ ವಸ್ತುಗಳನ್ನು ಉಚಿತವಾಗಿ ಸರ್ಕಾರ ಬಡವರ ಪ್ರತಿ ಮನೆಗೂ ಪಡಿತರ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಪುರಸಭಾ ಸದಸ್ಯ ಲುಕ್ಮಾನ್ ಉಪಸ್ಥಿತರಿದ್ದರು.