ಮಂಗಳೂರು: ಕರಾವಳಿ ಜಿಲ್ಲೆಗೆ ಅನುಕೂಲವಾಗುವಂತೆ ಪ್ರತ್ಯೇಕ ಮರಳು ನೀತಿ ಜಾರಿ ಮಾಡಿದಂತೆ ಕಲ್ಲು ಗಣಿಗಾರಿಕೆ ನಡೆಸಲು ಜಿಲ್ಲೆಯಲ್ಲಿ ವಿನಾಯಿತಿ ನೀಡಿ ಎಂದು ದ.ಕ ಮತ್ತು ಉಡುಪಿ ಜಿಲ್ಲಾ ಕ್ವಾರಿ ಮಾಲೀಕರ ಸಂಘ ಆಗ್ರಹಿಸಿದೆ.
ಕಲ್ಲು ಗಣಿಗಾರಿಕೆ ನಡೆಸಲು ವಿನಾಯಿತಿ ನೀಡಿ: ದ.ಕ ಮತ್ತು ಉಡುಪಿ ಜಿಲ್ಲಾ ಕ್ವಾರಿ ಮಾಲೀಕರ ಸಂಘ - stone mining
ಕರಾವಳಿ ಜಿಲ್ಲೆಯಲ್ಲಿ ಸಣ್ಣ-ಸಣ್ಣ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿಯ ಪರಿಸ್ಥಿತಿ ಗಮನಿಸಿ ಮರಳು ನೀತಿಯಂತೆ ಕಲ್ಲು ಗಣಿಗಾರಿಕೆಯಲ್ಲಿಯೂ ವಿನಾಯಿತಿಯನ್ನು ಸರ್ಕಾರ ನೀಡಲಿ.
ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ದ.ಕ ಮತ್ತು ಉಡುಪಿ ಜಿಲ್ಲಾ ಕ್ವಾರಿ ಮಾಲೀಕರ ಸಂಘದ ಅಧ್ಯಕ್ಷ ಮನೋಜ್ ಶೆಟ್ಟಿ ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿ ಸಣ್ಣ-ಸಣ್ಣ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿಯ ಪರಿಸ್ಥಿತಿ ಗಮನಿಸಿ ಮರಳು ನೀತಿಯಂತೆ ಕಲ್ಲು ಗಣಿಗಾರಿಕೆ ಯಲ್ಲಿಯೂ ವಿನಾಯಿತಿಯನ್ನು ಸರ್ಕಾರ ನೀಡಲಿ. ಕಲ್ಲು ಗಣಿಗಾರಿಕೆಗೆ ಸರ್ಕಾರ ವಿಧಿಸಿರುವ ಹೊಸ ನಿಯಮಗಳಿಂದ ಗೊಂದಲಗಳಾಗಿದ್ದು, ಈ ಹೊಸ ನಿಯಮಗಳು ಅರ್ಥಹೀನವಾಗಿವೆ. ಇದನ್ನು ತಕ್ಷಣ ಹಿಂಪಡೆದುಕೊಂಡು ಕಲ್ಲು ಗಣಿಗಾರಿಕೆ ಪುನರಾರಂಭಕ್ಕೆ ಕೂಡಲೇ ಅನುಮತಿ ನೀಡಬೇಕು ಎಂದರು.
ಇದನ್ನೂ ಓದಿ:ಪಾಕಿಸ್ತಾನಕ್ಕೆ ಕೊರೊನಾ ಲಸಿಕೆ ನೀಡುವ ಮುಂಚೆ ನಮ್ಮ ವಿದ್ಯಾರ್ಥಿಗಳಿಗೆ ನೀಡಿ : ಖಾದರ್ ಆಗ್ರಹ