ಬೆಳ್ತಂಗಡಿ:ಲಾಕ್‌ಡೌನ್‌ನಿಂದಾಗಿ ಗ್ಯಾರೇಜ್ ಕಾರ್ಮಿಕರು ಕೆಲಸವಿಲ್ಲದೆ ಕಷ್ಟದಲ್ಲಿದ್ದು, ಸರ್ಕಾರದಿಂದ ಪ್ಯಾಕೇಜ್ ಘೋಷಿಸುವಂತೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಶಾಸಕ ಹರೀಶ್ ಪೂಂಜಾ ಅವರ ಮೂಲಕ ಗ್ಯಾರೇಜ್ ಮಾಲೀಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಗ್ಯಾರೇಜ್ ಕಾರ್ಮಿಕರಿಗೆ ಪ್ಯಾಕೇಜ್ ಘೋಷಿಸಲು ಹರೀಶ್ ಪೂಂಜಾ ಮೂಲಕ ಸರ್ಕಾರಕ್ಕೆ ಮನವಿ
ಗ್ಯಾರೇಜ್ ಕಾರ್ಮಿಕರಿಗೆ ಸರ್ಕಾರದಿಂದ ಪ್ಯಾಕೇಜ್ ಘೋಷಿಸುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಶಾಸಕ ಹರೀಶ್ ಪೂಂಜಾ ಮೂಲಕ ಗ್ಯಾರೇಜ್ ಮಾಲೀಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ತಾಲೂಕಿನ ವಲಯದಲ್ಲಿ ಸುಮಾರು 800 ರಿಂದ ಒಂದು ಸಾವಿರಕ್ಕೂ ಹೆಚ್ಚು ಗ್ಯಾರೇಜ್ ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರು(ಮೆಕ್ಯಾನಿಕ್‌ಗಳು) ಇದ್ದು, ಎಲ್ಲಾ ಕಾರ್ಮಿಕರೂ ಮಧ್ಯಮ ವರ್ಗದವರು. ಈಗಾಗಲೇ ಸಂಘದಿಂದ ಸಾಧ್ಯವಾದಷ್ಟು ಸಹಾಯ ಕೂಡ ಮಾಡಲಾಗಿದೆ. ಇನ್ನು ಜಿಲ್ಲಾ ಸಂಘದ ವತಿಯಿಂದ ಸರ್ಕಾರಕ್ಕೆ ಈಗಾಗಲೇ ಗಮನ ಸೆಳೆಯಲು ಮನವಿ ಸಲ್ಲಿಸಲಾಗಿದೆ. ತಾಲೂಕಿನಲ್ಲಿ ಕೆಲವು ಗ್ಯಾರೇಜ್ ಕಾರ್ಮಿಕರಿಗೆ ಮತ್ತು ಸಣ್ಣ ಪುಟ್ಟ ಗ್ಯಾರೇಜ್ ಮಾಲೀಕರು ದೈನಂದಿನ ಖರ್ಚು ವೆಚ್ಚಗಳನ್ನು ಭರಿಸಲಾಗದೆ ಸಂಕಷ್ಟಕ್ಕೊಳಗಾಗುವಂತಾಗಿದೆ.
ಆದ್ದರಿಂದ ಸರ್ಕಾರದಿಂದ ಗ್ಯಾರೇಜ್ ಮಾಲೀಕರಿಗೆ ಪ್ಯಾಕೇಜ್ ಘೋಷಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಮತ್ತು ತಮ್ಮ ವತಿಯಿಂದ ಸಹಾಯ ಮಾಡಬೇಕು ಎಂದು ಮನವಿಯಲ್ಲಿ ಸಂಘ ವಿನಂತಿಸಿಕೊಂಡಿದೆ.