ಮಂಗಳೂರು :ಮಂಗಳೂರು ತಾಲೂಕಿನ ಕೊಣಾಜೆಯ ಕಂಬಳ ಪದವು ಎಂಬಲ್ಲಿ ರಿಕ್ಷಾವೊಂದು ಅಪಘಾತಕ್ಕೀಡಾಗಿದ್ದು, ಅದೇ ದಾರಿಯಲ್ಲಿ ಬರುತ್ತಿದ್ದ ಮಾಜಿ ಸಚಿವ ಯು ಟಿ ಖಾದರ್ ಅವರು ಗಾಯಾಳುಗಳನ್ನು ಉಪಚರಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾಜಿ ಸಚಿವ ಯು ಟಿ ಖಾದರ್ ಅವರು ನಿನ್ನೆ ರಾತ್ರಿ ಪುತ್ತೂರಿನಲ್ಲಿ ಕಾರ್ಯಕ್ರಮ ಮುಗಿಸಿ ಉಳ್ಳಾಲಕ್ಕೆ ಬರುತ್ತಿದ್ದ ವೇಳೆ ಕೊಣಾಜೆ ಸಮೀಪದ ಕಂಬಳ ಪದವು ಎಂಬಲ್ಲಿ ರಿಕ್ಷಾವೊಂದು ಪಲ್ಟಿಯಾಗಿರುವುದನ್ನು ಗಮನಿಸಿದ್ದರು. ಕಾರ್ಯಕ್ರಮ ಮುಗಿಸಿದ ಯುವಕರ ತಂಡವೊಂದು ರಿಕ್ಷಾದಲ್ಲಿ ಮನೆಗೆ ತೆರಳುತ್ತಿದ್ದರು. ಆ ವೇಳೆ ಕಂಬಳಪದವಿನಲ್ಲಿ ರಿಕ್ಷಾ ಪಲ್ಟಿಯಾಗಿ ಐವರು ಗಾಯಗೊಂಡಿದ್ದರು.