ಕರ್ನಾಟಕ

karnataka

ETV Bharat / state

'ಟ್ರಂಪ್​​ ಕಡೆಯಿಂದ ಬೇಕಾದ್ರೂ ಫೋನ್​​ ಕದ್ದಾಲಿಕೆ ಪ್ರಕರಣ ತನಿಖೆ ಮಾಡಿಸಲಿ'

ಪೋನ್ ಕದ್ದಾಲಿಕೆ ಪ್ರಕರಣದಲ್ಲಿ ನನ್ನ ಬಗ್ಗೆ ಸುದ್ದಿ ಮಾಡಿ ರಾಜ್ಯ ರಾಜಕಾರಣದಿಂದ ನನ್ನನ್ನು ತೆರೆಗೆ ಸರಿಸಲು ಯತ್ನಿಸಲಾಗುತ್ತಿದೆ. ನನ್ನ ಏನೂ ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿಕೆ ಹೇಳಿದರು.

ಕುಮಾರಸ್ವಾಮಿ

By

Published : Aug 18, 2019, 3:10 PM IST

ಮಂಗಳೂರು:ಫೋನ್​​ ಕದ್ದಾಲಿಕೆ ಪ್ರಕರಣವನ್ನು ಸಿಬಿಐ‌ಗೆ ನೀಡಲಿ ಅಥವಾ ಟ್ರಂಪ್​​ ಕಡೆಯಿಂದ ಯಾರನ್ನಾದರೂ ಕರೆಯಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನಿಖೆ ಮಾಡಿಸಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜನರು ನೆರೆಯಿಂದ ಕಂಗಾಲಾಗಿದ್ದಾರೆ. ಆದರೆ ಬಿಜೆಪಿ ಸರ್ಕಾರ ಬಂದು 25 ದಿನ ಕಳೆದರೂ ಸಚಿವ ಸಂಪುಟ ವಿಸ್ತರಣೆ ಮಾಡಿಲ್ಲ ಎಂದು ಹೇಳಿದರು.

ಫೋನ್​​ ಕದ್ದಾಲಿಕೆ ಪ್ರಕರಣ ತನಿಖೆ ಬಗ್ಗೆ ಕುಮಾರಸ್ವಾಮಿ ಪ್ರತಿಕ್ರಿಯೆ

ಎಲೆಕ್ಟ್ರಾನಿಕ್ ಮಾಧ್ಯಮದವರ ಮೇಲೆ ಹರಿಹಾಯ್ದ ಕುಮಾರಸ್ವಾಮಿ, ಪೋನ್ ಕದ್ದಾಲಿಕೆ ಪ್ರಕರಣದಲ್ಲಿ ನನ್ನ ಬಗ್ಗೆ ಸುದ್ದಿ ಮಾಡಿ ರಾಜ್ಯ ರಾಜಕಾರಣದಿಂದ ನನ್ನನ್ನು ದೂರ ಮಾಡಲು ಯತ್ನಿಸುತ್ತಿದ್ದಾರೆ. ಕುಮಾರಸ್ವಾಮಿಯನ್ನು ಅವರಿಗೆ ಏನೂ ಮಾಡಲು ಸಾಧ್ಯವಿಲ್ಲ. ಯಾಕೆ ಈ ವಿಚಾರದಲ್ಲಿ ನನ್ನನ್ನು ಥಳಕು ಹಾಕುತ್ತಿದ್ದಾರೋ ಗೊತ್ತಿಲ್ಲ. ನಾನು ಭಾಗಿಯಾದ್ದರೆ ಹೆದರಬೇಕಿತ್ತು. ಮಾಧ್ಯಮಗಳು ಸುಮ್ಮನೆ ಸ್ಟೋರಿ ಬಿಲ್ಡಪ್ ಮಾಡುತ್ತಿದ್ದಾರೆ. ನನಗೇನೂ ಆಗಲ್ಲ, ಎಲೆಕ್ಟ್ರಾನಿಕ್ ಮಾಧ್ಯಮದವರು ಅವರ ನಡೆಯನ್ನು ಮುಂದುವರೆಸಲಿ ಎಂದರು.

ABOUT THE AUTHOR

...view details