ಕರ್ನಾಟಕ

karnataka

ETV Bharat / state

ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ 5 ಆಂಗ್ಲ ಮಾಧ್ಯಮ ಶಾಲೆ: ಯು.ಟಿ ಖಾದರ್​

ಕರ್ನಾಟಕ ಸರಕಾರ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಸಕ್ತ ವರ್ಷದಿಂದ 5 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದೆ ಎಂದು ಹಂಗಾಮಿ ಸಚಿವ ಯು.ಟಿ.ಖಾದರ್​ ತಿಳಿಸಿದ್ರು.

By

Published : Jul 24, 2019, 11:45 PM IST

ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಸರಕಾರದ ವತಿಯಿಂದ 5 ಆಂಗ್ಲ ಮಾಧ್ಯಮ ಶಾಲೆ

ಮಂಗಳೂರು: ಕೇಂದ್ರ ಸರಕಾರವು ಮಾಹಿತಿ ಹಕ್ಕು ಕಾಯ್ದೆಯನ್ನು ದುರ್ಬಲಗೊಳಿಸಿ, ಸಂಸತ್ತಿನಲ್ಲಿ ಅಂಗೀಕರಿಸಿರುವುದು ದೇಶದ ಅತ್ಯಂತ ದೊಡ್ಡ ದುರಂತ ಎಂದು ಹಂಗಾಮಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲು ಮಾಹಿತಿ ಹಕ್ಕು ಪ್ರಬಲ ಅಸ್ತ್ರ. 2 ರೂ. ಸ್ಟ್ಯಾಂಪ್ ಅಂಟಿಸಿ ಅರ್ಜಿ ಬರೆದು ಕೊಟ್ಟಲ್ಲಿ 2 ಸಾವಿರ ಕೋಟಿ ರೂ.ನ ಮಾಹಿತಿ ಕೊಡುವ ಅವಕಾಶ ಇದ್ದರೆ ಅದು ಯುಪಿಎ ಸರಕಾರ ನೀಡಿದ ಮಾಹಿತಿ ಹಕ್ಕು ಕಾಯ್ದೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿ ಸರಕಾರದ ವತಿಯಿಂದ 5 ಆಂಗ್ಲ ಮಾಧ್ಯಮ ಶಾಲೆ

ಕರ್ನಾಟಕ ಸರಕಾರ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಸಕ್ತ ವರ್ಷದಿಂದ 5 ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಿದೆ. ಅಲ್ಲದೆ ನನ್ನ ಕ್ಷೇತ್ರದಲ್ಲಿ ಹೆಚ್ಚುವರಿಯಾಗಿ ಮೂರು ಆಂಗ್ಲ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಯಾವ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಪಿಯುಸಿವರೆಗೆ ವಿದ್ಯಾಭ್ಯಾಸ ಲಭ್ಯವಿದೆಯೋ ಅಂತಹ ಶಾಲೆಗಳನ್ನು ಆಯ್ಕೆ ಮಾಡಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಎಂದು ಕೇಂದ್ರೀಯ ವಿದ್ಯಾಲಯಗಳ ರೀತಿಯಲ್ಲಿ ಉನ್ನತ ದರ್ಜೆಗೇರಿಸಲಾಗುವುದು ಎಂದು ಯು.ಟಿ.ಖಾದರ್ ತಿಳಿಸಿದ್ರು.

ABOUT THE AUTHOR

...view details