ಮಂಗಳೂರು: ಬೆಂಕಿ ಪೊಟ್ಟಣದ ಫ್ಯಾಕ್ಟರಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿರೋ ಘಟನೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿ ನಡೆದಿದೆ.
ಬೆಳ್ತಂಗಡಿಯಲ್ಲಿ ಬೆಂಕಿ ಪೊಟ್ಟಣ ಫ್ಯಾಕ್ಟರಿಗೆ ಬೆಂಕಿ: ಅಪಾರ ನಷ್ಟ - ಬೆಂಕಿ ಪೊಟ್ಟಣ ಫ್ಯಾಕ್ಟರಿ
ಬೆಂಕಿ ಪೊಟ್ಟಣದ ಫ್ಯಾಕ್ಟರಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿರೋ ಘಟನೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿಯಲ್ಲಿ ನಡೆದಿದೆ.
ಬೆಂಕಿ ಪೊಟ್ಟಣ ಫ್ಯಾಕ್ಟರಿಗೆ ಬೆಂಕಿ
ಬೆಳ್ತಂಗಡಿಯ ಕನ್ಯಾಡಿಯಲ್ಲಿರುವ ವಿನಾಯಕ ಇಂಡಸ್ಟ್ರೀಸ್ನಲ್ಲಿ ಈ ಘಟನೆ ಸಂಭವಿಸಿದ್ದು, ಬೆಂಕಿಯ ಕೆನ್ನಾಲಿಗೆ ಪಕ್ಕದ ಗುಡ್ಡಕ್ಕೂ ಹರಡಿದೆ. ಇನ್ನು ಇದರ ಪಕ್ಕದಲ್ಲೇ ಗ್ಯಾಸ್ ಬಂಕ್ ಕೂಡಾ ಇದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ.ಫ್ಯಾಕ್ಟರಿಯಲ್ಲಿ ಯಾವುದೇ ಫೈರ್ ಆಂಡ್ ಸೇಫ್ಟಿ ಉಪಕರಣಗಳಿಲ್ಲ. ಹೀಗಾಗಿ ಯಾವುದೇ ತುರ್ತು ಕ್ರಮ ಕೈಗೊಳ್ಳಲಾಗದೆ ಬೆಂಕಿ ಬಲು ಬೇಗನೆ ಹರಡಿದೆ.
ಸದ್ಯ ಅಗ್ನಿಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಸಹಕಾರ ನೀಡಿದ್ದಾರೆ.