ಕರ್ನಾಟಕ

karnataka

ರಬ್ಬರ್ ನಿಗಮದ ಅರಣ್ಯ ಪ್ರದೇಶಕ್ಕೆ ಬೆಂಕಿ.. ಕಣ್ಮುಂದೆ ಹೊತ್ತಿ ಉರಿದರೂ ನಂದಿಸಲು ಜನ ಬರಲಿಲ್ಲ

By

Published : May 6, 2019, 10:38 AM IST

Updated : May 6, 2019, 11:04 AM IST

ಕೆಎಫ್‌ಡಿಸಿ ರಬ್ಬರ್ ನಿಗಮದ ಅರಣ್ಯ ಪ್ರದೇಶಕ್ಕೆ ನಿನ್ನೆ ಬೆಂಕಿ ಹೊತ್ತಿಕೊಂಡಿತ್ತು. ಹಿಂದೊಮ್ಮೆ ಇಂತದ್ದೇ ಘಟನೆ ನಡೆದಿದ್ದಾಗ ಅಧಿಕಾರಿಗಳು ಸಾರ್ವಜನಿಕರ ಮೇಲೆ ಬೇಲಿ ಮುರಿದ ಆರೋಪ ಮಾಡಿದ್ದರಿಂದ ನಿನ್ನೆ ಜನ ಬೆಂಕಿ ನಂದಿಸೋದಕ್ಕಾಗಿ ಆ ಕಡೆ ಸುಳಿಯಲೇ ಇಲ್ಲ.

ಕಡಬ ರಬ್ಬರ್ ನಿಗಮಕ್ಕೆ ಬೆಂಕಿ

ಮಂಗಳೂರು:ಕಡಬ ತಾಲೂಕಿನ ಸುಂಕದಕಟ್ಟೆ ಗ್ರಾಮದ ಕೆಎಫ್‌ಡಿಸಿ ರಬ್ಬರ್ ನಿಗಮದ ಅರಣ್ಯ ಪ್ರದೇಶಕ್ಕೆ ನಿನ್ನೆ ಬೆಂಕಿ ಹೊತ್ತಿದ್ರಿಂದ, ಅದನ್ನ ನಂದಿಸಲು ಅಧಿಕಾರಿಗಳು, ಸಾರ್ವಜನಿಕರು ಪರದಾಡುವಂತಾಗಿತ್ತು.

ಕಡಬ ರಬ್ಬರ್ ನಿಗಮಕ್ಕೆ ಬೆಂಕಿ

ರಬ್ಬರ್ ನಿಗಮದ ಅರಣ್ಯ ಪ್ರದೇಶದಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಅದು ಇಡೀ ಅರಣ್ಯ ಪ್ರದೇಶಕ್ಕೆ ವ್ಯಾಪಿಸಲಾರಂಭಿಸಿತ್ತು.ಈ ಮೊದಲು ಇದೇ ರೀತಿ ಬೆಂಕಿ ಹತ್ತಿಕೊಂಡಾಗ ಸಾರ್ವಜನಿಕರು ಬೆಂಕಿ ನಂದಿಸಲು ಕಷ್ಟ ಪಟ್ಟಿದ್ದರು. ಆದರೆ, ಆಗ ಬೇಲಿ ಕಿತ್ತು ಹೋಗಿದೆ ಎಂಬ ಕಾರಣ ಮುಂದಿಟ್ಟು ರಬ್ಬರ್ ನಿಗಮದ ಅಧಿಕಾರಿಗಳು ಸಾರ್ವಜನಿಕರನ್ನು ತರಾಟೆಗೆ ತೆಗೆದುಕೊಂಡಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಕೆಎಫ್‌ಡಿಸಿ ರಬ್ಬರ್ ನಿಗಮದ ಅಧಿಕಾರಿಗಳ ಮೇಲೆ ಬೇಸರಗೊಂಡು ನಿನ್ನೆ ಬೆಂಕಿ ನಂದಿಸಲು ಹೆಚ್ಚಿನ ಸಾರ್ವಜನಿಕರು ಮುಂದಾಗಲಿಲ್ಲ.

Last Updated : May 6, 2019, 11:04 AM IST

For All Latest Updates

TAGGED:

ABOUT THE AUTHOR

...view details