ಮಂಗಳೂರು:ಮನೆಯೊಂದರಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ, ಬೈಕ್ ಸೇರಿದಂತೆ ವಿದ್ಯುತ್ ಉಪಕರಣಗಳು ಬೆಂಕಿಗಾಹುತಿಯಾದ ಘಟನೆ, ಇಲ್ಲಿನ ಕಣ್ಣೂರಿನ ಅಡ್ಯಾರ್ ಸಮೀಪದ ಕರ್ಮಾರ್ ಎಂಬಲ್ಲಿ ನಡೆದಿದೆ.
ಮನೆಯಲ್ಲಿ ಅಗ್ನಿ ದುರಂತ: ಲಕ್ಷಾಂತರ ರೂ. ಸಾಮಗ್ರಿ ಬೆಂಕಿಗಾಹುತಿ
ಅಡ್ಯಾರ್ನ ಕರ್ಮಾರ್ ನಿವಾಸಿ ಮರಿಯಮ್ಮ ಎಂಬವರ ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಬೆಂಕಿಗಾಹುತಿ
ಅಡ್ಯಾರ್ನ ಕರ್ಮಾರ್ ನಿವಾಸಿ ಮರಿಯಮ್ಮ ಎಂಬವರ ಮನೆಯಲ್ಲಿ ಈ ಅಗ್ನಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಅಗ್ನಿ ದುರಂತದ ಪರಿಣಾಮ ಬೈಕ್ ಸಹಿತ ವಿದ್ಯುತ್ ಉಪಕರಣಗಳು ಸುಟ್ಟು ಕರಕಲಾಗಿವೆ. ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ ದೊಡ್ಡ ದುರಂತ ತಪ್ಪಿದೆ.