ಮಂಗಳೂರು (ದ.ಕ):ಕೊರೊನಾ ಕಾರಣದಿಂದ ಕೇರಳ ಮತ್ತು ಕರ್ನಾಟಕ ಗಡಿ ಮುಚ್ಚಿದ್ದು ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಇ-ಪಾಸ್ ಅವಧಿಯನ್ನು ವಿಸ್ತರಿಸಲಾಗಿದೆ.
ಕಾಸರಗೋಡಿನಿಂದ ದ.ಕ ಜಿಲ್ಲೆಗೆ ಬರುವವರಿಗೆ ಇ-ಪಾಸ್ ಅವಧಿ ವಿಸ್ತರಣೆ - Tallapadi Check Post
ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾಸರಗೋಡು ಜಿಲ್ಲೆಯಿಂದ ಬರುವವರಿಗೆ ನೀಡಿದ ಪಾಸ್ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತದೆ. ಈ ಪಾಸ್ ಅವಧಿಯನ್ನು ಇದೀಗ ಜುಲೈ 4ರ ವರೆಗೆ ವಿಸ್ತರಿಸಲಾಗಿದೆ.
ಕಾಸರಗೋಡಿನಿಂದ ದಿನಂಪ್ರತಿ ನೂರಾರು ಜನರು ಕೆಲಸದ ನಿಮಿತ್ತ ಬರುವವರಿದ್ದು ಇವರ ಅನುಕೂಲಕ್ಕೆ ಗಡಿಬಂದ್ ಆಗಿದ್ದರೂ ಇ-ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಇ-ಪಾಸನ್ನು ಕೇರಳ ಕರ್ನಾಟಕ ಗಡಿಪ್ರದೇಶವಾದ ತಲಪಾಡಿ ಚೆಕ್ಪೋಸ್ಟ್ನಲ್ಲಿ ತೋರಿಸಿ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಿಸಬೇಕಾಗಿದೆ.
ಎರಡು ಜಿಲ್ಲೆಗಳ ಜಿಲ್ಲಾಡಳಿತ ಇ-ಪಾಸ್ ವ್ಯವಸ್ಥೆ ಮಾಡಿತ್ತು. ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕಾಸರಗೋಡು ಜಿಲ್ಲೆಯಿಂದ ಬರುವವರಿಗೆ ನೀಡಿದ ಪಾಸ್ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತದೆ. ಈ ಪಾಸ್ ಅವಧಿಯನ್ನು ಜುಲೈ 4ರ ವರೆಗೆ ವಿಸ್ತರಿಸಲಾಗಿದೆ. ಇಂದಿಗೆ ಮುಗಿಯುವ ಪಾಸನ್ನು ನವೀಕರಣಕ್ಕಾಗಿ ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.