ಕರ್ನಾಟಕ

karnataka

ETV Bharat / state

ಗಿಡ ನೆಡುವ ಮೂಲಕ ವಿಶಿಷ್ಟವಾಗಿ  ಪರಿಸರ ದಿನ ಆಚರಿಸಿದ ಆಶಾ ಕಾರ್ಯಕರ್ತೆ

ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್​​​​​ನ ಮೊಡಂಕಾಪು ಸರಿದಂತರ ಪ್ರಕಾಶನ ಆಶ್ರಯದಲ್ಲಿ ವಿಶ್ವ ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸಲಾಯಿತು.

environment day
environment day

By

Published : Jun 5, 2020, 3:41 PM IST

ಬಂಟ್ವಾಳ (ದಕ್ಷಿಣ ಕನ್ನಡ): ವಿಶ್ವ ಪರಿಸರ ದಿನವನ್ನು ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಸರಿದಂತರ ಪ್ರಕಾಶನದ ಆಶ್ರಯದಲ್ಲಿ ಪ್ರೊ.ರಾಜಮಣಿ ರಾಮಕುಂಜ ನೇತೃತ್ವದಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.

ಕೋವಿಡ್-19 ನಿವಾರಣೆಗೆ ಶ್ರಮಿಸುವ ಆಶಾ ಕಾರ್ಯಕರ್ತೆ ಮಮತಾ ಅವರು, ಗಿಡ ನೆಡುವ ಮೂಲಕ ಪರಿಸರ ದಿನವನ್ನು ಅರ್ಥಪೂರ್ಣವಾಗಿಸಿದರು.

ಪರಿಸರ ದಿನಾಚರಣೆ

ಈ ಸಂದರ್ಭದಲ್ಲಿ ಬಂಟ್ವಾಳ ಸರ್ಕಾರಿ ಕಾಲೇಜು ಪ್ರಾಂಶುಪಾಲ ಡಾ. ಅಜಕ್ಕಳ ಗಿರೀಶ ಭಟ್ ಮಾತನಾಡಿ, ಜಾಗತಿಕ ತಾಪಮಾನ ಏರುತ್ತಿರುವ ಈ ದಿನಗಳಲ್ಲಿ ನಮಗೆ ಉಳಿದಿರುವ ಏಕೈಕ ಮಾರ್ಗ ಎಂದರೆ ಗಿಡಮರಗಳ ನೆಡುವಿಕೆ ಮತ್ತು ಅವುಗಳ ಸಂರಕ್ಷಣೆ ಮಾತ್ರ ಎಂದರು.

ಪರಿಸರದ ಇರವಿನ ಸತ್ಯ ಹಾಗೂ ಅದರ ಒಳಗಿನ ಸತ್ವವನ್ನು ಅರಿತು ಬಾಳಿದಾಗ ಮಾತ್ರ ಆರೋಗ್ಯಪೂರ್ಣ ಬದುಕು ಸಾಧ್ಯ ಎಂದು ಪ್ರಕಾಶನದ ಸಂಚಾಲಕ ಪ್ರೊ.ರಾಜಮಣಿ ರಾಮಕುಂಜ ಹೇಳಿದರು.

ಆಸಕ್ತರಿಗೆ ಗಿಡಗಳನ್ನು ಹಂಚಲಾಯಿತು. ಪ್ರಕಾಶನದ ಭಾರತಿ, ಧಾತ್ರಿ, ಜಗದೀಶ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.

ABOUT THE AUTHOR

...view details