ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಸಣ್ಣತನ ಬಿಟ್ಟು ಸದನದಲ್ಲಿ ಚರ್ಚಿಸಲಿ; ಸದಾನಂದ ಗೌಡ

ನಾವು ದಾರಿಯಲ್ಲಿ ಹೇಳಿಕೆ ಕೊಟ್ಟು ತನಿಖೆಯ ಹಾದಿ ತಪ್ಪಿಸಬಾರದು. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಇದನ್ನು ಬಿಟ್ಟು ಬಿಡಲಿ. ಯಾವ ಜಾಗದಲ್ಲಿ ಚರ್ಚಿಸಬೇಕೊ ಅಲ್ಲಿ ಮಾತಾಡಲಿ ಎಂದಿದ್ದಾರೆ.

DV Sadananda gowda
ಕೇಂದ್ರ ಸಚಿವ ಸದಾನಂದ ಗೌಡ

By

Published : Mar 6, 2021, 7:34 PM IST

ಮಂಗಳೂರು (ದ.ಕ): ಮಾಜಿ‌ ಸಿಎಂ ಸಿದ್ದರಾಮಯ್ಯ ಅವರಿಗೆ ಬೂಟಾಟಿಕೆ ಮಾಡಿ ಹರಿಹಾಯುವುದೇ ಹುಟ್ಟುಗುಣ ಎಂದು ಕೇಂದ್ರ ಸಚಿವ ಸದಾನಂದ ಗೌಡ ಟೀಕಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಡಿ ವಿಚಾರ ಎತ್ತಿಕೊಂಡು ಸದನ ನಡೆಯಲು ಅವರು ಬಿಡುವುದಿಲ್ಲ. ಅವರು ಸದನ ನಡೆಯಲು ಬಿಡಲಿ, ಚರ್ಚೆ ನಡೆಸುವುದಿದ್ದರೆ ಸದನದಲ್ಲಿ‌ ನಡೆಸಲಿ ಎಂದರು.

ಬೂಟಾಟಿಕೆ ಮಾಡಿ ಹರಿಹಾಯುವುದೆ ಸಿದ್ದರಾಮಯ್ಯರ ಹುಟ್ಟುಗುಣ: ಸದಾನಂದ ಗೌಡ ವಾಗ್ದಾಳಿ

ಸಚಿವ ಯೋಗೇಶ್ವರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ತನಿಖೆ ನಡೆಯುತ್ತಿರುವಾಗ ಮಂತ್ರಿಗಳ ಸ್ಥಾನಮಾನದ ಘನತೆ ಉಳಿಸಿಕೊಂಡು ನಮ್ಮ ಕೆಲಸ ಮಾಡಬೇಕು. ನಾವು ದಾರಿಯಲ್ಲಿ ಹೇಳಿಕೆ ಕೊಟ್ಟು ತನಿಖೆಯ ಹಾದಿ ತಪ್ಪಿಸಬಾರದು. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಇದನ್ನು ಬಿಟ್ಟು ಬಿಡಲಿ. ಯಾವ ಜಾಗದಲ್ಲಿ ಚರ್ಚಿಸಬೇಕೊ ಅಲ್ಲಿ ಮಾತಾಡಲಿ. ವಿಧಾನಸಭೆಯಲ್ಲಿ ಅವರು ಮಾತಾಡಲಿ, ಸಣ್ಣತನ ಬಿಡಲಿ ಎಂದರು.

ಘಟನೆಯಿಂದ ಪಕ್ಷಕ್ಕೆ‌ ಮುಜುಗರ ಆಗುವುದೆಂಬುದು ಎರಡನೆಯದು. ನಮ್ಮ ಯಾವುದೇ ಹಸ್ತಕ್ಷೇಪ, ಒತ್ತಡ ಇಲ್ಲದೆ ತನಿಖೆ ಮಾಡಲು ಪೊಲೀಸರಿಗೆ ಹೇಳಿದ್ದೇವೆ ಎಂದರು.

ಇದನ್ನೂ ಓದಿ:ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಕರ್ನಾಟಕ ಪ್ರವಾಸ ರದ್ದು

ABOUT THE AUTHOR

...view details