ಕಡಬ (ದಕ್ಷಿಣ ಕನ್ನಡ):ಕೆಎಸ್ಆರ್ಟಿಸಿ ಬಸ್ನಲ್ಲಿ ಮುಗ್ಗರಿಸಿ ಕುಳಿತ ಸ್ಥಿತಿಯಲ್ಲಿ ಬಸ್ ಚಾಲಕನ ಮೃತದೇಹ ಪತ್ತೆಯಾಗಿದೆ.
ಬಸ್ನಲ್ಲಿ ಮುಗ್ಗರಿಸಿ ಕುಳಿತ ಸ್ಥಿತಿಯಲ್ಲಿ ಚಾಲಕನ ಮೃತದೇಹ ಪತ್ತೆ
ಕೆಎಸ್ಆರ್ಟಿಸಿ ಬಸ್ನಲ್ಲಿ ಮುಗ್ಗರಿಸಿ ಕುಳಿತ ಸ್ಥಿತಿಯಲ್ಲಿ ಬಸ್ ಚಾಲಕನ ಮೃತದೇಹ ಪತ್ತೆಯಾಗಿದೆ.
ಚಾಲಕನ ಮೃತದೇಹ ಪತ್ತೆ
ಹೃದಯಾಘಾತದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಮೃತ ಚಾಲಕನನ್ನು ಬೀದರ್ ಮೂಲದ ರೇವಣ್ಣಪ್ಪ ಎಂದು ಗುರುತಿಸಲಾಗಿದೆ. ಪುತ್ತೂರಿನಿಂದ ಮಂಗಳವಾರ ಸಂಜೆ ಕಡಬಕ್ಕೆ ಆಗಮಿಸಿದ ಬಸ್ಅನ್ನು ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಮೀಪ ಹೆದ್ದಾರಿಯ ಪಕ್ಕದಲ್ಲಿ ರಾತ್ರಿ ನಿಲ್ಲಿಸಲಾಗಿತ್ತು. ಬೆಳಗ್ಗೆ ಶಾಂತಿಮೊಗರು ಮಾರ್ಗವಾಗಿ ಪುತ್ತೂರಿಗೆ ತೆರಳಬೇಕಿತ್ತು.
ಬೆಳಗ್ಗೆ ಬಸ್ನ ನಿರ್ವಾಹಕ ಎದ್ದು ಚಾಲಕನನ್ನು ಕರೆಯಲೆಂದು ನೋಡಿದಾಗ ಬಸ್ನಲ್ಲಿ ಮುಗ್ಗರಿಸಿ ಕುಳಿತ ಸ್ಥಿತಿಯಲ್ಲಿ ಬಸ್ ಚಾಲಕನ ಮೃತದೇಹ ಕಂಡಿದೆ.