ಮಂಗಳೂರು: ಸಮುದ್ರತೀರದಲ್ಲಿದ್ದ ಹೂಳು ತೆಗೆಯುವ ಡ್ರಡ್ಜರ್ ತೂತಾಗಿ ನೀರು ಒಳನುಗ್ಗಿದ್ದು ಇಡೀ ಡ್ರಡ್ಜರ್ ಸಮುದ್ರಪಾಲಾಗಿದೆ.
ಡ್ರಡ್ಜರ್ ಒಳಗೆ ನುಗ್ಗಿದ ನೀರು:13 ಜನರ ರಕ್ಷಣೆ
ಸಮುದ್ರದಲ್ಲಿ ತೀರದಲ್ಲಿ ಹೂಳು ತೆಗೆಯಲು ಬಂದಿದ್ದ ಡ್ರಡ್ಜರ್ ಒಳಗೆ ನೀರು ನುಗ್ಗಿದ್ದ ಪರಿಣಾಮ ಅಪಾಯದಲ್ಲಿದ್ದ 13 ಮಂದಿಯನ್ನು ರಕ್ಷಣೆ ಮಾಡಲಾಗಿದೆ.
ಡ್ರಡ್ಜರ್ ಒಳಗೆ ನುಗ್ಗಿದ ನೀರು:13 ಜನರ ರಕ್ಷಣೆ
ನಿನ್ನೆ ಮುಂಜಾವು ಸುಮಾರು 2.30 ರ ಸುಮಾರಿಗೆ ತ್ರಿದೇವಿ ಪ್ರೇಮ್ ಎಂಬ ಹೆಸರಿನ ಡ್ರಡ್ಜರ್ಗೆ ನೀರು ಒಳನುಗ್ಗಿತ್ತು. ಪರಿಣಾಮ ಡ್ರಡ್ಜರ್ ನಾದ್ಯಂತ ನೀರು ಆವರಿಸಿ ಇಂದು ಸಮುದ್ರದಲ್ಲಿ ಮುಳುಗಿದೆ.
ನಿನ್ನೆ ಮುಂಜಾವಿನಲ್ಲಿ ಈ ಡ್ರಡ್ಜರ್ನಲ್ಲಿದ್ದ 13 ಮಂದಿಯನ್ನು ಐಸಿಜಿಎಸ್ ಅಮರ್ಥ್ಯ ಕೋಸ್ಟ್ ಗಾರ್ಡ್ ರಕ್ಷಣಾ ಬೋಟ್ ಸಿಬ್ಬಂದಿ ರಕ್ಷಿಸಿದ್ದರು. ಅವರನ್ನು ರಕ್ಷಿಸಿದ ಒಂದು ದಿನದ ಬಳಿಕ ಈ ಬೋಟ್ ಸಂಪೂರ್ಣ ಮುಳುಗಿದೆ.