ಕರ್ನಾಟಕ

karnataka

ETV Bharat / state

ದಕ್ಷಿಣ ಕನ್ನಡದಲ್ಲಿ ಮಹಿಳಾ ಮತದಾರರ ಪ್ರಾಬಲ್ಯ: 100 ಬೂತ್​ಗಳಲ್ಲಿ ಕರಾವಳಿಯ ಕಲೆಯ ಟಚ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,860 ಮತಗಟ್ಟೆಯಲ್ಲಿ 100 ಮತಗಟ್ಟೆಗಳನ್ನು ಕರಾವಳಿಯ ಕಲೆಗಳ ಮೂಲಕ ಸಿಂಗರಿಸಲು ನಿರ್ಧರಿಸಲಾಗಿದ್ದು, ಯಕ್ಷಗಾನ, ಕಂಬಳ, ನೀಲಿ ಅಲೆ, ಹೆರಿಟೇಜ್, ಗೋ ಗ್ರೀನ್, ಎತ್ನಿಕ್, ಯುವ, ಸಖಿ, ಪಿಡಬ್ಲ್ಯುಡಿ ಬೂತ್​ಗಳು ಇರಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ರವಿಕುಮಾರ್ ಎಂಆರ್ ತಿಳಿಸಿದರು.

dominance-of-women-voters-in-dakshina-kannada-touch-of-coastal-art-in-100-booths
ದಕ್ಷಿಣ ಕನ್ನಡದಲ್ಲಿ ಮಹಿಳಾ ಮತದಾರರ ಪ್ರಾಬಲ್ಯ: 100 ಬೂತ್​ಗಳಲ್ಲಿ ಕರಾವಳಿಯ ಕಲೆಯ ಟಚ್

By

Published : Mar 30, 2023, 9:37 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಮೇ 10ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ರವಿಕುಮಾರ್ ಎಂಆರ್ ಅವರಿಂದು ಪತ್ರಿಕಾಗೋಷ್ಠಿಯಲ್ಲಿ ವಿವಿಧ ಮಾಹಿತಿಗಳನ್ನು ಹಂಚಿಕೊಂಡರು.

ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಾದ ಬೆಳ್ತಂಗಡಿ, ಮೂಡಬಿದಿರೆ, ಮಂಗಳೂರು ನಗರ ಉತ್ತರ, ಮಂಗಳೂರು ನಗರ ದಕ್ಷಿಣ, ಮಂಗಳೂರು, ಬಂಟ್ವಾಳ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರಗಳಿಗೆ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಛೇರಿಯಲ್ಲಿ ನಾಮಪತ್ರ ಸ್ವೀಕರಿಸಲಾಗುತ್ತದೆ. ಬೆಳ್ತಂಗಡಿಗೆ ಹೆಚ್.ಆರ್.ಯೋಗೀಶ್, ಮೂಡಬಿದಿರೆಗೆ ಮಹೇಶ್ಚಂದ್ರ.ಕೆ, ಮಂಗಳೂರು ನಗರ ಉತ್ತರಕ್ಕೆ ಅಭಿಷೇಕ್.ವಿ, ಮಂಗಳೂರು ನಗರ ದಕ್ಷಿಣಕ್ಕೆ ಕೆಂಪೇಗೌಡ.ಹೆಚ್, ಮಂಗಳೂರಿಗೆ ರಾಜು.ಕೆ, ಬಂಟ್ವಾಳ ಅಬಿದ್ ಗಡ್ಯಾಲ್, ಪುತ್ತೂರಿಗೆ ಗಿರೀಶ್ ನಂದನ್.ಎಂ, ಸುಳ್ಯಕ್ಕೆ ಅರುಣ್ ಕುಮಾರ್ ಸಂಗಾವಿ ಚುನಾವಣಾಧಿಕಾರಿಯಾಗಿರಲಿದ್ದಾರೆ ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಮತದಾರರ ಪ್ರಾಬಲ್ಯ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಜಾಸ್ತಿ ಇದೆ. ಬೆಳ್ತಂಗಡಿ ಕ್ಷೇತ್ರದಲ್ಲಿ 1,12,106 ಪುರುಷರು, 1,13,167 ಮಹಿಳೆಯರು, ಮೂಡಬಿದಿರೆ ಕ್ಷೇತ್ರದಲ್ಲಿ 97,920 ಪುರುಷರು, 1,04,668 ಮಹಿಳೆಯರು, ಮಂಗಳೂರು ನಗರ ಉತ್ತರದಲ್ಲಿ 1,19,435 ಪುರುಷರು, 1,26,904 ಮಹಿಳೆಯರು, ಮಂಗಳೂರು ನಗರ ದಕ್ಷಿಣ ದಲ್ಲಿ 1,15,920 ಪುರುಷರು, 1,26,441 ಮಹಿಳೆಯರು, ಮಂಗಳೂರಿಲ್ಲಿ 99,185 ಪುರುಷರು, 1,02,823 ಮಹಿಳೆಯರು, ಬಂಟ್ವಾಳದಲ್ಲಿ 1,10,584 ಪುರುಷರು, 1,14,230 ಮಹಿಳೆಯರು, ಪುತ್ತೂರು ಕ್ಷೇತ್ರದಲ್ಲಿ 1,03,942 ಪುರುಷರು, 1,06,577 ಮಹಿಳೆಯರು, ಸುಳ್ಯ ಕ್ಷೇತ್ರದಲ್ಲಿ 1,01,304 ಪುರುಷರು, 1,03,366 ಮಹಿಳೆಯರು ಇದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 17,58,647 ಮತದಾರರಿದ್ದು, ಇದರಲ್ಲಿ 8,60,396 ಪುರುಷರು, 8,98,176 ಮಹಿಳೆಯರು ಮತ್ತು 75 ಮಂದಿ ತೃತೀಯ ಲಿಂಗಿಯರು ಇದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 18 ಮತ್ತು 19 ವರ್ಷ ವಯಸ್ಸಿನ ಯುವ ಮತದಾರರ ಸಂಖ್ಯೆ 33,577 ಇದೆ.

80 ವರ್ಷ ಮೇಲ್ಪಟ್ಟ ಮತದಾರರಿಗೆ‌ ಮನೆಯಲ್ಲಿ ಮತದಾನ ವ್ಯವಸ್ಥೆ:80 ವರ್ಷ ಮೇಲ್ಪಟ್ಟ ಮತ್ತು ಶೇ.40ಕ್ಕಿಂತ ಹೆಚ್ಚು ಅಂಗನ್ಯೂನತೆ ಹೊಂದಿರುವ ಮತದಾರರಿಗೆ ಮನೆಯಲ್ಲಿ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 38,294, 90 ವರ್ಷ ಮೇಲ್ಪಟ್ಟ 8,102, 100 ವರ್ಷ ಮೇಲ್ಪಟ್ಟ 531 ಮತ್ತು ಅಂಗನ್ಯೂನತೆ ಹೊಂದಿರುವ 14,007 ಮತದಾರರಿದ್ದು ಒಟ್ಟು 60,934 ಮತದಾರರಿದ್ದಾರೆ. ಇವರಿಗೆ‌ ಮನೆಯಲ್ಲಿಯೆ ಮತದಾನ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಇದಕ್ಕಾಗಿ ಅವರನ್ನು ಮೇ 5ರೊಳಗೆ ಸಂಪರ್ಕ ಮಾಡಿ ಮೇ 6ರಿಂದ ನಿಯಾಮವಳಿಯಂತೆ ಮತದಾನ ವ್ಯವಸ್ಥೆ ಮಾಡಲಾಗುವುದು ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,860 ಮತಗಟ್ಟೆ ಇರಲಿದೆ. ಇದರಲ್ಲಿ 100 ಮತಗಟ್ಟೆಗಳನ್ನು ಕರಾವಳಿಯ ಕಲೆಗಳ ಮೂಲಕ ಸಿಂಗರಿಸಲು ನಿರ್ಧರಿಸಲಾಗಿದೆ. ಯಕ್ಷಗಾನ, ಕಂಬಳ, ನೀಲಿ ಅಲೆ, ಹೆರಿಟೇಜ್, ಗೋ ಗ್ರೀನ್, ಎತ್ನಿಕ್, ಯುವ, ಸಖಿ, ಪಿಡಬ್ಲ್ಯುಡಿ ಬೂತ್​ಗಳು ಇರಲಿದೆ ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯು ಕೇರಳ ರಾಜ್ಯದ ಗಡಿಭಾಗದಲ್ಲಿರುವುದರಿಂದ ಅಂತಾರಾಜ್ಯ ಗಡಿಯಲ್ಲಿ ಚೆಕ್​ ಪೋಸ್ಟ್ ಮಾಡಲಾಗಿದೆ. 10 ಅಂತರ್ ರಾಜ್ಯ ಗಡಿ ಚೆಕ್ ಪೋಸ್ಟ್ ಮಾಡಲಾಗಿದ್ದು, 8 ಅಂತರ್​ ಜಿಲ್ಲಾ ಮತ್ತು 9 ಸ್ಥಳೀಯವಾಗಿ ಚೆಕ್ ಪೋಸ್ಟ್ ಮಾಡಲಾಗಿದೆ.

ಮೊದಲ ದಿನವೇ 200 ಲೀಟರ್ ಮದ್ಯ, 65 ಕೆಜಿ ಗಾಂಜಾ ವಶ:ಚುನಾವಣಾ ನೀತಿ ಸಂಹಿತೆ ಜಾರಿಯಾದ ಮೊದಲ ದಿನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲೆಗಳಿಲ್ಲದ 10 ಲಕ್ಷ ರೂ ನಗದು, 200 ಲೀಟರ್ ಮದ್ಯ ಮತ್ತು 65 ಕೆ.ಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಲ, ನೇಮ, ಯಕ್ಷಗಾನ ಸೇರಿದಂತೆ ಎಲ್ಲಾ ಧರ್ಮಗಳ ಧಾರ್ಮಿಕ ಸಮಾರಂಭ ನಡೆಸಲು ಚುನಾವಣಾ ನೀತಿ ಸಂಹಿತೆಯಿಂದ ಅಡ್ಡಿಯಿಲ್ಲ. ಆದರೆ ಬ್ಯಾನರ್ ಅಳವಡಿಸಲು ಸ್ಥಳೀಯ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು ಎಂದು ತಿಳಿಸಿದರು.

ಇದನ್ನೂ ಓದಿ:ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ನಡುವೆ ಒಳ ಒಪ್ಪಂದ: ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ

ABOUT THE AUTHOR

...view details