ಮಂಗಳೂರು:ಅನಾರೋಗ್ಯದಿಂದ ಬಳಲುತ್ತಿರುವ ಕಾಂಗ್ರೆಸ್ ಮಧ್ಯಂತ ಅಧ್ಯಕ್ಷೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಮೂರು ದಿನಗಳಲ್ಲಿ ಗುಣಮುಖರಾಗದಿದ್ದರೆ ಕುದ್ರೋಳಿ ದೇವಸ್ಥಾನದ ಒಳಗೆ ಪ್ರವೇಶಿಸುವುದಿಲ್ಲವೆಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಶಪಥ ಮಾಡಿದ್ದಾರೆ.
ಸೋನಿಯಾ ಗಾಂಧಿ ಅನಾರೋಗ್ಯ ವಿಚಾರ: ದೇವರ ಎದುರೇ ಈ ಶಪಥ ಕೈಗೊಂಡ್ರು ಜನಾರ್ದನ ಪೂಜಾರಿ! - ಕುದ್ರೋಳಿ ದೇವಸ್ಥಾನದ ಒಳಗೆ ಪ್ರವೇಶಿಸುವುದಿಲ್ಲ: ಜನಾರ್ದನ ಪೂಜಾರಿ
ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಮೂರು ದಿನಗಳಲ್ಲಿ ಗುಣಮುಖರಾಗದಿದ್ದರೆ ಕುದ್ರೋಳಿ ದೇವಸ್ಥಾನದ ಒಳಗೆ ಪ್ರವೇಶಿಸುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಶಪಥ ಮಾಡಿದ್ದಾರೆ.
ಸೋನಿಯಾಗಾಂಧಿ ಶೀಘ್ರ ಗುಣಮುಖರಾಗಲೆಂದು ಕುದ್ರೋಳಿ ದೇವಸ್ಥಾನದಲ್ಲಿ ಇಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ ಅವರು ಈ ಶಪಥ ಮಾಡಿದರು. ಜನಾರ್ದನ ಪೂಜಾರಿಗೆ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಸಾಥ್ ನೀಡಿದ್ರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಪೂಜಾರಿ ಅವರು, ಸೋನಿಯಾ ಗಾಂಧಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕುಟುಂಬ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಭಕ್ತರು. ಮಂಗಳೂರಿಗೆ ಬಂದಾಗ ಕ್ಷೇತ್ರಕ್ಕೆ ಭೇಟಿ ಕೊಟ್ಟು ಪರಮಾತ್ಮನ ಬಳಿ ಪ್ರಾರ್ಥಿಸಿದ್ದಾರೆ. ನಾವು ಆಡಳಿತ ಮಂಡಳಿಯಿಂದ ವಿಶೇಷ ಪ್ರಾರ್ಥನೆ ಸಲ್ಲಿಸಿ ಸೋನಿಯಾ ಗಾಂಧಿಯನ್ನು ಬದುಕಿಸು ಎಂದು ದೇವರಿಗೆ ಬೇಡಿಕೊಂಡಿದ್ದೇವೆ. ದೇವರು ಬದುಕಿಸುವ ನಂಬಿಕೆ ಇದೆ. ಮೂರು ದಿನದ ಒಳಗೆ ಸೋನಿಯಾ ಗಾಂಧಿ ಗುಣಮುಖರಾಗದೆ ಇದ್ದರೆ ದೇವಸ್ಥಾನದ ಒಳಗೆ ಪ್ರವೇಶಿಸುವುದಿಲ್ಲ ಎಂದು ಶಪಥ ಮಾಡಿರುವುದಾಗಿ ಅವರು ತಿಳಿಸಿದರು.