ಕರ್ನಾಟಕ

karnataka

ETV Bharat / state

ದೀಪಾವಳಿ ಸಂಭ್ರಮ: ಮಂಗಳೂರಿನಲ್ಲಿ ಎಲ್ಲೆಡೆ ಗೋಪೂಜೆ - Mangalore news

ದೇವರ ರೂಪದಲ್ಲಿ ಆರಾಧಿಸಲಾಗುವ ಗೋವುಗಳಿಗೆ ದೀಪಾವಳಿಯ ಎರಡನೇ ದಿನದಲ್ಲಿ ಗೋಪೂಜೆ ನಡೆಸಲಾಗುತ್ತದೆ. ಕೃಷಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಗೋಪೂಜೆಯನ್ನು ಮಂಗಳೂರಿನ ಮರೋಳಿಯಲ್ಲಿರುವ ಸೂರ್ಯನಾರಾಯಣ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಆಚರಿಸಲಾಯಿತು.

ದೀಪಾವಳಿ ಸಂಭ್ರಮ: ಮಂಗಳೂರಿನಲ್ಲಿ ಎಲ್ಲೆಡೆ ಗೋಪೂಜೆ

By

Published : Oct 28, 2019, 7:04 PM IST

ಮಂಗಳೂರು:ದೀಪಾವಳಿ ಹಬ್ಬದ ಪ್ರಯುಕ್ತ ಕರಾವಳಿ ಜಿಲ್ಲೆಯಲ್ಲಿಂದು ಎಲ್ಲೆಡೆ ಗೋಪೂಜೆ ಸಂಭ್ರಮದಿಂದ ನಡೆಯಿತು.

ದೀಪಾವಳಿ ಸಂಭ್ರಮ: ಮಂಗಳೂರಿನಲ್ಲಿ ಎಲ್ಲೆಡೆ ಗೋಪೂಜೆ

ಗೋವುಗಳಲ್ಲಿ 33 ಕೋಟಿ ದೇವರಿದ್ದಾರೆ ಎಂದು ಆರಾಧಿಸಲಾಗುತ್ತದೆ. ದೇವರ ರೂಪದಲ್ಲಿ ಆರಾಧಿಸಲಾಗುವ ಗೋವುಗಳಿಗೆ ದೀಪಾವಳಿಯ ಎರಡನೇ ದಿನದಲ್ಲಿ ಗೋಪೂಜೆ ನಡೆಸಲಾಗುತ್ತದೆ. ಈ ಆಚರಣೆಯನ್ನು ಗೋವನ್ನು ಹೊಂದಿರುವವರು, ಕೃಷಿಕರು ಸಂಭ್ರಮದಿಂದ ಆಚರಿಸಿದರು. ಕೃಷಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಗೋಪೂಜೆಯನ್ನು ಮಂಗಳೂರಿನ ಮರೋಳಿಯಲ್ಲಿರುವ ಸೂರ್ಯನಾರಾಯಣ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಆಚರಿಸಲಾಯಿತು.

ಮರೋಳಿಯ ಬಜರಂಗದಳ, ದುರ್ಗಾವಾಹಿನಿ ಮತ್ತು ವಿಶ್ವಹಿಂದೂ ಪರಿಷತ್ ಆಶ್ರಯದಲ್ಲಿ ನಡೆದ ಸಾಮೂಹಿಕ ಗೋಪೂಜೆಯಲ್ಲಿ ಹಲವು ಗೋವುಗಳನ್ನು ಪೂಜೆ ಮಾಡಿ ಆರಾಧಿಸಲಾಯಿತು. ಆರಂಭದಲ್ಲಿ ಗೋವುಗಳಿಗೆ ಸ್ನಾನ ಮಾಡಿಸಿ ಅಲಂಕರಿಸಿ, ಹೂಹಾರ ಹಾಕಿ, ಹೊಸ ಬಟ್ಟೆಯನ್ನು ಹಾಕಿ ಪೂಜೆ ಮಾಡಲಾಯಿತು. ಪೂಜೆಯ ಬಳಿಕ ಆರತಿ ಎತ್ತಿ ಗೋವುಗಳಿಗೆ ಅರಳು ಮತ್ತು ಬಾಳೆಹಣ್ಣು ನೀಡಲಾಯಿತು.

ಮರೋಳಿ ಸೂರ್ಯನಾರಾಯಣ ದೇವಸ್ಥಾನದಲ್ಲಿ ಸಾಮೂಹಿಕವಾಗಿ ನಡೆದ ಗೋಪೂಜೆಯಲ್ಲಿ ಹಲವಾರು ಮಂದಿ ಭಾಗವಹಿಸಿದ್ದರು. ಒಟ್ಟಿನಲ್ಲಿ ಕರಾವಳಿಯಲ್ಲಿ ಗೋವುಗಳನ್ನು ಆರಾಧಿಸುವ ಗೋಪೂಜೆ ಸಂಭ್ರಮದಿಂದ ನಡೆಯಿತು.

ABOUT THE AUTHOR

...view details