ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಡಿಜಿಟಲೀಕರಣ ಪಡೆದುಕೊಂಡಿದ್ದು, ಜಿಲ್ಲೆಯಲ್ಲಿ ಯಾವುದೇ ಘಟನೆಗಳಾದರೂ ಪೊಲೀಸರು ಅಲ್ಲಿಗೆ ಧಾವಿಸಿ ಸಮಸ್ಯೆ ಪರಿಹರಿಸುವ ವ್ಯವಸ್ಥೆ ಆರಂಭವಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಡಿಜಿಟಲೀಕರಣ
ಪೊಲೀಸ್, ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್‌ಗಾಗಿ ಬೇರೆ ಬೇರೆ ನಂಬರ್‌ಗಳಿಗೆ ಕಾಲ್ ಮಾಡಬೇಕಿಲ್ಲ. ಈ ಮೂರಕ್ಕೂ 112 ಒಂದೇ ನಂಬರ್ ಜಾರಿಗೆ ಬಂದಿದೆ.
ಪೊಲೀಸ್, ಅಗ್ನಿಶಾಮಕ ಮತ್ತು ಆ್ಯಂಬುಲೆನ್ಸ್‌ಗಾಗಿ ಬೇರೆ ಬೇರೆ ನಂಬರ್‌ಗಳಿಗೆ ಕಾಲ್ ಮಾಡಬೇಕಿಲ್ಲ. ಈ ಮೂರಕ್ಕೂ 112 ಒಂದೇ ನಂಬರ್ ಜಾರಿಗೆ ಬಂದಿದೆ. ಈ ಸಹಾಯವಾಣಿಗೆ ಕರೆ ಮಾಡುವ ಮೂಲಕ ಎಲ್ಲ ಸೇವೆಗಳನ್ನು ಪಡೆಯಬಹುದು. ಕರೆ ಮಾಡಿದರೆ ಅದು ಬೆಂಗಳೂರು ಕಂಟ್ರೋಲ್ ರೂಮ್ಗೆ ಹೋಗುತ್ತದೆ. ಅದು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದ ವಿಚಾರವಾಗಿದ್ದರೆ ಕಂಪ್ಯೂಟರ್ ಮೂಲಕ ಮಂಗಳೂರಿಗೆ ಮಾಹಿತಿ ರವಾನಿಸಲಾಗುತ್ತದೆ. ಕರೆ ಬಂದ ಅರ್ಧ ಗಂಟೆಯೊಳಗೆ ಪೊಲೀಸ್ ವಾಹನ ಘಟನಾ ಸ್ಥಳಕ್ಕೆ ತೆರಳಲಿದೆ.
ಎಫ್ಐಆರ್, ರೌಡಿ ಟ್ರಾಕಿಂಗ್, ಫೈಲ್ಸ್, ಸಮನ್ಸ್, ವಾರೆಂಟ್ ಪೊಲೀಸ್ ಐಟಿಯಲ್ಲಿ (ಪೊಲೀಸ್ ಇಲಾಖೆಯ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಗಣಕೀಕರಣಗೊಳಿಸುವ ಸಾಮರ್ಥ್ಯ ಹೊಂದಿದೆ) ದಾಖಲಾಗುತ್ತದೆ. ಇ-ಸಿಂಧುತ್ವ, ಸೇವಾ ಸಿಂಧು ಮೂಲಕ ಪೊಲೀಸ್ ಪರಿಶೀಲನೆಗೆ ಅರ್ಜಿ ಸಲ್ಲಿಸಬಹುದು. ಡಿಜಿಟಲ್ ಮೂಲಕವೇ ಸರ್ಟಿಫಿಕೇಟ್ ಸಹ ಸಿಗುತ್ತದೆ.