ಬೆಳ್ತಂಗಡಿ: ಅಳದಂಗಡಿ ಅರಮನೆಯಲ್ಲಿ ಅಜಿಲ ಸೀಮೆ ಅರಸ ಡಾ. ಪದ್ಮಪ್ರಸಾದ್ ಅಜಿಲ ಅವರ ರಜತ ಸಂಭ್ರಮದ ನಿಮಿತ್ತ ಡಿ.22ರಂದು ಧರ್ಮನೇಮ ಆಯೋಜಿಸಲಾಗಿತ್ತು.
ಅಳದಂಗಡಿ ಅರಮನೆಯಲ್ಲಿ ಧರ್ಮನೇಮ: ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ
ಅಳದಂಗಡಿ ಅರಮನೆಯಲ್ಲಿ ಸೀಮೆಯ ಪ್ರಧಾನ ದೈವಗಳಿಗೆ ಧರ್ಮನೇಮ ಆಯೋಜಿಸಲಾಗಿತ್ತು. ಈ ವೇಳೆ, ಸಂಸದ ನಳಿನ್ ಕುಮಾರ್ ಕಟೀಲ್ ಅಳದಂಗಡಿ ಅರಸರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಅಳದಂಗಡಿ ಅರಮನೆಯಲ್ಲಿ ಧರ್ಮನೇಮ: ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ
ಈ ವೇಳೆ, ಸಂಸದ ನಳಿನ್ ಕುಮಾರ್ ಕಟೀಲ್ ಅಳದಂಗಡಿ ಅರಸರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅಳದಂಗಡಿ ಅರಮನೆಯಲ್ಲಿ ಸೀಮೆಯ ಪ್ರಧಾನ ದೈವಗಳಿಗೆ ಧರ್ಮನೇಮ ಆಯೋಜಿಸಲಾಗಿತ್ತು. ಡಿ. 22ರಂದು ಪೂರ್ವಾಹ್ನ 9.15ಕ್ಕೆ ತೋರಣ ಮುಹೂರ್ತ, ಸಂಜೆ 3ಕ್ಕೆ ನಾವರ ಮಾಗಣೆ ಗುತ್ತಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಹೊರಡುವುದು ನಡೆಯಿತು.
ಸಂಜೆ 4.30ಕ್ಕೆ ಅಳದಂಗಡಿ ಶ್ರೀ ಸೋಮನಾಥೇಶ್ವರೀ ದೇವಸ್ಥಾನದಿಂದ ಮೂಜಿಲ್ನಾಯ ದೈವದ ಭಂಡಾರ ಹೊರಡಿತು. ರಾತ್ರಿ ಘಂಟೆ 8ಕ್ಕೆ ಕೊಡಮಣಿತ್ತಾಯ ಮತ್ತು ಮೂಜಿಲ್ನಾಯ ದೈವದ ನೇಮ ನಡೆಯಿತು.