ದಕ್ಷಿಣಕನ್ನಡ:ಲಾಕ್ಡೌನ್ ಆದೇಶಗಳನ್ನು ಉಲ್ಲಂಘಿಸಿ ಅನಗತ್ಯವಾಗಿ ತಿರುಗಾಡಿದರೆ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಲಾಗುವುದು ಎಂದು ಪುತ್ತೂರು ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲ್ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಹೊರಗಡೆ ವಿನಾ ಕಾರಣ ತಿರುಗಾಡಿದರೆ ಕ್ರಿಮಿನಲ್ ಕೇಸ್...ಎಸಿ ಎಚ್ಚರಿಕೆ - Dr. Yatish Ullal, Assistant Commissioner, Putur, News
ಲಾಕ್ಡೌನ್ ನಿಯಮ ಉಲ್ಲಂಘಿಸಿ ವಿನಾಕಾರಣ ತಿರುಗಾಡಿದರೆ ಕ್ರಮಿನಲ್ ಕೇಸ್ ದಾಖಲಿಸುವುದಾಗಿ ಪುತ್ತೂರು ಸಹಾಯಕ ಆಯುಕ್ತರಾದ ಡಾ.ಯತೀಶ್ ಉಳ್ಳಾಲ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹೊರಗಡೆ ವಿನಾಃ ಕಾರಣ ತಿರುಗಾಡಿದರೆ ಕ್ರಿಮಿನಲ್ ಕೇಸ್...ಎಸಿ ಎಚ್ಚರಿಕೆ
ಅಗತ್ಯ ವಸ್ತುಗಳ ಪೊರೈಕೆ ಸಲುವಾಗಿ ಕಡಬದಲ್ಲಿ ನಡೆದ ವರ್ತಕರ ಸಭೆಯ ನಂತರ ಮಾಧ್ಯಮದ ಜೊತೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಜನರು ವಿನಾ ಕಾರಣ ಹೊರಗಡೆ ಬರಬಾರದು. ಅಲ್ಲಲ್ಲಿ ಸುತ್ತಾಡುವುದು ಕಂಡುಬಂದಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.
ಅಲ್ಲದೇ, ಯಾವುದೇ ಕಾರಣಕ್ಕೂ ಅಗತ್ಯ ವಸ್ತುಗಳ ಪೊರೈಕೆಯಲ್ಲಿ ಅಡಚಣೆ ಆಗಲ್ಲ. ಇಗಾಗಲೇ ವರ್ತಕರಿಗೆ ದಿನಸಿ ತರಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.