ಸುಳ್ಯ:ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಯಾರಾದರೂ ಕೋವಿಡ್ ಸೋಂಕಿಗೆ ಒಳಗಾದರೆ ಶಾಸಕರ ವಾರ್ ರೂಂ ಮೂಲಕ ಸಹಾಯ ಮಾಡಲಾಗುವುದು ಎಂದು ಸಚಿವ ಎಸ್.ಅಂಗಾರ ಹೇಳಿದರು.
ಸುಳ್ಯ ಹಾಗೂ ಕಡಬದಲ್ಲಿ ಶಾಸಕರ ಕೋವಿಡ್ ವಾರ್ ರೂಂ ಉದ್ಘಾಟಿಸಿ ಮಾತನಾಡಿದ ಅವರು, ಸುಳ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾರಾದರೂ ಕೊರೊನಾದಿಂದ ಸಂಕಷ್ಟ ಎದುರಿಸುತ್ತಿರುವವರು ಶಾಸಕರ ವಾರ್ ರೂಂ ಸಂಪರ್ಕಿಸಿದರೆ ಅವರಿಗೆ ಬೇಕಾದ ಆ್ಯಂಬ್ಯುಲೆನ್ಸ್ ಒದಗಿಸಿಕೊಡುವುದು, ಔಷಧಿ ತಲುಪಿಸುವುದು ಸೇರಿಂದಂತೆ ಅಗತ್ಯ ಸಹಾಯ ಮಾಡಿಕೊಡಲಾಗುವುದು ಎಂದರು.