ಬಂಟ್ವಾಳ :ಭಾನುವಾರ ಮೃತಪಟ್ಟ ಮಹಿಳೆ ಪಕ್ಕದ ಮನೆಯ 67 ವರ್ಷದ ಮಹಿಳೆಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಮಹಿಳೆಯ ಮನೆಯವರೂ ಸೇರಿದಂತೆ ಮಂಗಳವಾರ 9 ಮಂದಿಯನ್ನು ಕ್ವಾರಂಟೈನ್ನಲ್ಲಿರಿಸಿ, ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ.
ಭಾನುವಾರ ಸಂಜೆ ಅದೇ ಪ್ರದೇಶದ 28 ಮಂದಿ ಸೇರಿ ಒಟ್ಟು 34 ಮಂದಿಯನ್ನು ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಇದೀಗ ಒಟ್ಟು 43 ಮಂದಿಯನ್ನು ಕ್ವಾರಂಟೈನ್ ನಲ್ಲಿರಿಸಲಾಗಿದೆ, ಇವರಲ್ಲಿ ಸಣ್ಣ ಮಕ್ಕಳೂ ಇದ್ದಾರೆ.
ಭಾನುವಾರ ಕೋವಿಡ್ ಕಂಡುಬಂದ ಮಹಿಳೆಯ ಮನೆಯಲ್ಲಿ ಐವರು ವಾಸಿಸುತ್ತಿದ್ದು, ಅವರಲ್ಲಿ ಮಹಿಳೆಯ ಪತಿ, ಮಗ, ಮಗಳು, ಮೊಮ್ಮಗಳು ಸೇರಿದ್ದಾರೆ. ಬಂಟ್ವಾಳ ತಾಲೂಕಿನಲ್ಲಿ ಇದುವರೆಗೆ 4 ಮಂದಿಗೆ ಕೋವಿಡ್ 19 ಪಾಸಿಟಿವ್ ಬಂದಿದ್ದು, ಅವರಲ್ಲಿ ಒಬ್ಬರು ಮೃತರಾಗಿದ್ದಾರೆ. ಇಬ್ಬರು ಗುಣಮುಖರಾಗಿದ್ದು, ಮತ್ತೋರ್ವ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಸ್ಥಳಕ್ಕೆ ಸಹಾಯಕ ಕಮೀಷನರ್ ಮದನ್ ಮೋಹನ್ ಆಗಮಿಸಿ, ಸ್ಥಳ ಪರಿಶೀಲನೆ ನಡೆಸಿ, ಆರೋಗ್ಯ ಇಲಾಖೆ, ಆಶಾ ಕಾರ್ಯಕರ್ತೆಯರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡರು. ಅಗತ್ಯ ಸೇವೆಗೆ ಕಂಟ್ರೋಲ್ ರೂಮ್ ಸಹಾಯವಾಣಿ 08255-233130 ಕರೆ ಮಾಡಲು ಸೂಚಿಸಲಾಗಿದೆ.