ಮಂಗಳೂರು:ಮುಸ್ಲಿಂ ಸಮುದಾಯ ಒಂದು ತಿಂಗಳ ರಂಜಾನ್ ಉಪವಾಸ ವೃತವನ್ನು ಆಚರಿಸಿ ಇದೀಗ ರಂಜಾನ್ ಹಬ್ಬದ ತಯಾರಿಗೆ ಸಿದ್ಧತೆ ನಡೆಸುತ್ತಿದೆ. ರಂಜಾನ್ ಹಬ್ಬದಲ್ಲಿ ಮುಸ್ಲಿಂ ಸಮುದಾಯದವರಿಗೆ ಪ್ರಮುಖವಾಗಿ ಬೇಕಾದದ್ದು ಟೋಪಿ ಮತ್ತು ಸುಗಂಧ ದ್ರವ್ಯ. ಇದರ ಖರೀದಿ ಭರಾಟೆ ಈಗಾಗಲೇ ನಗರದಲ್ಲಿ ಆರಂಭವಾಗಿದೆ.
ಮಂಗಳೂರಿನಲ್ಲಿ ಕಳೆದ 85 ವರ್ಷಗಳಿಂದ ಟೋಪಿ ಮತ್ತು ಸುಗಂಧ ದ್ರವ್ಯದ ವ್ಯಾಪಾರ ಮಾಡುತ್ತಿರುವ ಮಂಗಳೂರಿನ ಬಂದರ್ನಲ್ಲಿರುವ ಜೆಎಂ ರಸ್ತೆಯಲ್ಲಿರುವ ಅಸ್ಗರ್ ಆಲಿ ಅತ್ತರ್ ವಾಲ ಅಂಗಡಿಯಲ್ಲಿ ಬಗೆ ಬಗೆಯ ಟೋಪಿಗಳು, ಸುಗಂಧ ದ್ರವ್ಯಗಳು ಮಾರಾಟಕ್ಕೆ ಇದೆ. ಹಿಂದೆ ಬಿಳಿ ಟೋಪಿಯ ಖರೀದಿ ಇದ್ದರೆ, ಇತ್ತೀಚೆಗೆ ಯುವಕರು ಕಪ್ಪು ಬಣ್ಣದ ಟೋಪಿಗಳತ್ತ ಆಕರ್ಷಿತರಾಗಿದ್ದಾರೆ. ಬಗೆ ಬಗೆಯ ಬಣ್ಣದ ಟೋಪಿಗಳು , ಹಲವು ಬ್ರಾಂಡ್ಗಳ ಸುಗಂಧ ದ್ರವ್ಯಗಳು ಇಲ್ಲಿ ಮಾರಾಟಕ್ಕೆ ಇಡಲಾಗಿದ್ದು, ರಂಜಾನ್ ಹಬ್ಬಕ್ಕಾಗಿಯೇ ಇವುಗಳನ್ನು ತರಿಸಲಾಗಿದೆ.