ಮಂಗಳೂರು: ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಎರಡನೇ ಮಹಡಿಯಿಂದ ಓರ್ವ ಕೊರೊನಾ ಸೋಂಕಿತ ಹಾರಿದ ಘಟನೆ ಇಂದು ನಡೆದಿದೆ.
ವೆನ್ಲಾಕ್ ಕೋವಿಡ್ ಆಸ್ಪತ್ರೆಯಿಂದ ಜಿಗಿದ ಕೊರೊನಾ ಸೋಂಕಿತ: ಅಪಾಯದಿಂದ ಪಾರು - wenlock kovid hospital
ಮಂಗಳೂರು ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯ ಎರಡನೇ ಮಹಡಿಯಿಂದ ಓರ್ವ ಕೊರೊನಾ ಸೋಂಕಿತ ಜಿಗಿದಿದ್ದು, ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ.
patient
ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಸೋಂಕಿತ ಪಾರಾಗಿದ್ದಾನೆ. ಮಂಗಳೂರಿನ ಕಲ್ಲಮುಂಡ್ಕೂರಿನ ಬನಂಗಡಿ ನಿವಾಸಿ ಹರೀಶ್(30) ಕೋವಿಡ್ ಆಸ್ಪತ್ರೆಯ ಎರಡನೇ ಮಹಡಿಯಿಂದ ಹಾರಿದಾತ.
ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿದ್ದ ಈತನಿಗೆ ಕೊರೊನಾ ಸೋಂಕು ತಗುಲಿತ್ತು. ಈ ಹಿನ್ನೆಲೆಯಲ್ಲಿ ನಗರದ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಇಂದು ಈತ ಏಕಾಏಕಿ ಕೋವಿಡ್ ಆಸ್ಪತ್ರೆಯ 2 ನೇ ಮಹಡಿಯಿಂದ ಹಾರಿದ್ದಾನೆ. ಪರಿಣಾಮ ತಲೆಗೆ ಹಾಗೂ ದೈಹಿಕವಾಗಿ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾನೆ.