ಮಂಗಳೂರು: ಕೊರೊನಾ ಸೋಂಕಿತ ವ್ಯಕ್ತಿಯೊಬ್ಬಆಸ್ಪತ್ರೆಗೆ ಹೋಗಲು ಒಪ್ಪದೆ ಓಡಿಹೋಗಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆಸ್ಪತ್ರೆಗೆ ದಾಖಲಾಗಲು ಆ್ಯಂಬ್ಯುಲೆನ್ಸ್ ಬಂದಾಗ ಭೀತಿಗೊಳಗಾದ ಸೋಂಕಿತ ಓಡಲು ಯತ್ನಿಸಿದ್ದಾನೆ. ಕೊನೆಗೂ ಅವರ ಮನವೊಲಿಸಿದ ಅಧಿಕಾರಿಗಳು ಆಸ್ಪತ್ರೆಗೆ ಸೇರಿಸಿದ್ದಾರೆ.
ಆಸ್ಪತ್ರೆಗೆ ಹೋಗಲು ಹೆದರಿ ಓಡಿದ ಕೊರೊನಾ ಸೋಂಕಿತ..!
ಆಸ್ಪತ್ರೆಗೆ ದಾಖಲಾಗಲು ಆ್ಯಂಬ್ಯುಲೆನ್ಸ್ ಬಂದಾಗ ಭೀತಿಗೊಳಗಾದ ಸೋಂಕಿತ ಓಡಲು ಯತ್ನಿಸಿದ್ದಾನೆ. ಕೊನೆಗೂ ಅವರ ಮನವೊಲಿಸಿದ ಅಧಿಕಾರಿಗಳು ಆಸ್ಪತ್ರೆಗೆ ಸೇರಿಸಿದ್ದಾರೆ.
ಉತ್ತರಾಖಂಡ ರಾಜ್ಯದ ಕೂಲಿ ಕಾರ್ಮಿಕನು ಹಂಪನಕಟ್ಟೆ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಹಲವು ದಿನಗಳಿಂದ ಕೆಲಸ ಮಾಡುತ್ತಿದ್ದನು. ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆ, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲು ದ್ರವ ಮಾದರಿ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು.
ವಿಷಯ ತಿಳಿದ ಆರೋಗ್ಯ ಇಲಾಖೆಯ ಅಧಿಕಾರಿಗಳು ವ್ಯಕ್ತಿಯನ್ನು ಕರೆದೊಯ್ಯಲು ಆಸ್ಪತ್ರೆಗೆ ತೆರಳಿದ್ದರು. ಆ್ಯಂಬುಲೆನ್ಸ್‌ಗೆ ಹತ್ತಿಸುವ ಸಂದರ್ಭ ಕೂಲಿ ಕಾರ್ಮಿಕ ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾನೆ. ಕೆಲ ಸಮಯದ ಬಳಿಕ ನಗರದ ಟವರ್ ಕ್ಲಾಕ್ ಬಳಿ ಕಂಡಿದ್ದು, ಕೊನೆಗೆ ಬಂದರು ಠಾಣೆ ಪೊಲೀಸರು ಮನವೊಲಿಸಿ ವೆನ್ಲಾಕ್ ಕೊವಿಡ್ ಆಸ್ಪತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.