ಕರ್ನಾಟಕ

karnataka

ETV Bharat / state

ರಾಜ್ಯದಲ್ಲೇ ಅತ್ಯಧಿಕ ಕೊರೊನಾ ಪಾಸಿಟಿವ್ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲು - Dakshina kannada Border alert

ಸೋಂಕು ಹರಡುವ ಪ್ರಾಣಿಗಳಾದ ಬಾವಲಿ, ಹಂದಿಗಳಿಂದ ದೂರವಿರಬೇಕು. ಪ್ರಾಣಿ-ಪಕ್ಷಿಗಳು ತಿಂದು ಬಿಟ್ಟಿರುವಂತಹ ಹಣ್ಣು-ಹಂಪಲುಗಳನ್ನು ಸೇವಿಸಬಾರದು. ಸೋಂಕಿತ ವ್ಯಕ್ತಿಯ ದೇಹ ದ್ರವಗಳಿಂದ ರೋಗ ಹರಡುವ ಸಂಭವವಿರುವುದರಿಂದ ಎಚ್ಚರಿಕೆವಹಿಸಬೇಕು..

dakshina-kannada
ದಕ್ಷಿಣ ಕನ್ನಡ

By

Published : Sep 6, 2021, 9:39 PM IST

ಮಂಗಳೂರು :ಇಂದು ಅತ್ಯಧಿಕ ಕೊರೊನಾ ಸೋಂಕಿತರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿದಾರೆ. ರಾಜ್ಯದಲ್ಲಿ ಇಂದು ಪತ್ತೆಯಾದ ಪ್ರಕರಣದಲ್ಲಿ ಶೇ. 25ಕ್ಕೂ ಅಧಿಕ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗಿವೆ. 973 ಹೊಸ ಪ್ರಕರಣಗಳಲ್ಲಿ 258 ಸೋಂಕಿತರು ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿದವರು. ಬೆಂಗಳೂರಿನಲ್ಲಿ 243 ಪ್ರಕರಣ ಪತ್ತೆಯಾಗಿದ್ದು, 2ನೇ ಸ್ಥಾನದಲ್ಲಿದೆ.

ಕೇರಳದ ಗಡಿಯ ಗ್ರಾಮದಲ್ಲಿ ಮದ್ಯ ಮಾರಾಟ ನಿಷೇಧ ಮುಂದುವರಿಕೆ

ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಿರುವ ಹಿನ್ನೆಲೆ ಗಡಿಭಾಗದಲ್ಲಿರುವ 19 ಗ್ರಾಮಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಮದ್ಯ ಮಾರಾಟ ನಿಷೇಧವನ್ನು ಮುಂದುವರೆಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಆದೇಶಿಸಿದ್ದಾರೆ.

ಕೇರಳದ ಗಡಿಭಾಗದಲ್ಲಿರುವ ಜನರು ಮದ್ಯಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿರುವ ಅಂಗಡಿಗಳನ್ನು ಅವಲಂಬಿಸಿರುವುದರಿಂದ ಜಿಲ್ಲೆಯ ಗಡಿಭಾಗದಲ್ಲಿರುವ 19 ಗ್ರಾಮಗಳ 26 ಐಎಂಎಲ್ ಮತ್ತು 5 ಶೇಂದಿ ಅಂಗಡಿಗಳಲ್ಲಿ ಮದ್ಯಮಾರಾಟ ನಿಷೇಧ ಮಾಡಲಾಗಿತ್ತು. ಇಂದಿನವರೆಗೆ ಇದ್ದ ಈ ಆದೇಶವನ್ನು ಸೆಪ್ಟೆಂಬರ್ 13ಕವರೆಗೆ ಮುಂದುವರೆಸಿ ಆದೇಶಿಸಲಾಗಿದೆ.

ನಿಫಾ ಅಲರ್ಟ್ ಘೋಷಣೆ

ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿರುವ ಹಿನ್ನೆಲೆ ಗಡಿಭಾಗದಲ್ಲಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಿಸಲಾಗಿದೆ. ಕೇರಳದ ಕೊಯಿಕ್ಕೋಡ್​ನಲ್ಲಿ 12ರ ಬಾಲಕ ನಿಫಾ ವೈರಸ್ ರೋಗದಿಂದ ಸಾವನ್ನಪ್ಪಿದ್ದ.

ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆ ಕೇರಳದ ಗಡಿಭಾಗದಲ್ಲಿರುವುದರಿಂದ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಕಟ್ಟೆಚ್ಚರವಹಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕೇರಳದಿಂದ ಸಾಕಷ್ಟು ಮಂದಿ ಆರೋಗ್ಯ ಮತ್ತು ಶಿಕ್ಷಣ ಸಂಬಂಧ ಮಂಗಳೂರಿನ ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಬರುತ್ತಿರುವುದರಿಂದ ಸಂಬಂಧಪಟ್ಟವರು ತಕ್ಷಣದಿಂದಲೇ ಮುಂಜಾಗ್ರತಾ ಕ್ರಮಗಳನ್ನು ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ. ಸಾಬೂನು ಮತ್ತು ನೀರಿನಿಂದ ಪದೇಪದೆ ಕೈ ತೊಳೆಯಬೇಕು.

ಸೋಂಕು ಹರಡುವ ಪ್ರಾಣಿಗಳಾದ ಬಾವಲಿ, ಹಂದಿಗಳಿಂದ ದೂರವಿರಬೇಕು. ಪ್ರಾಣಿ-ಪಕ್ಷಿಗಳು ತಿಂದು ಬಿಟ್ಟಿರುವಂತಹ ಹಣ್ಣು-ಹಂಪಲುಗಳನ್ನು ಸೇವಿಸಬಾರದು. ಸೋಂಕಿತ ವ್ಯಕ್ತಿಯ ದೇಹ ದ್ರವಗಳಿಂದ ರೋಗ ಹರಡುವ ಸಂಭವವಿರುವುದರಿಂದ ಎಚ್ಚರಿಕೆವಹಿಸಬೇಕು.

ನಿಫಾ ಶಂಕಿತ ಪ್ರದೇಶಗಳಿಂದ ಬರುವ ಜ್ವರದ ಪ್ರಕರಣಗಳನ್ನು ನಿಫಾ ವೈರಸ್ ಪ್ರಕರಣ ಎಂದು ತಿಳಿದುಕೊಂಡು ಅವರನ್ನು ಪ್ರತ್ಯೇಕಿಸುವುದು ಸೇರಿದಂತೆ ಸಂಕಿತ ಪ್ರಕರಣ ಕಂಡು ಬಂದ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಓದಿ:ಇಂಧನ ದರ ಹೆಚ್ಚಳ : ಪರಿಸರ ಸ್ನೇಹಿ electric bike ಮೊರೆ ಹೋದ ಶಿವಮೊಗ್ಗ ಜನ

ABOUT THE AUTHOR

...view details