ಕರ್ನಾಟಕ

karnataka

ETV Bharat / state

ಬಂಟ್ವಾಳದಲ್ಲಿ ಮತ್ತೆ ಮುಂದುವರಿದ ಕೋವಿಡ್ ಆತಂಕ: 2 ದಿನಗಳಲ್ಲಿ 10 ಜನರಿಗೆ ಸೋಂಕು - bantwala corona cases

ಬಂಟ್ವಾಳ ತಾಲೂಕಿನಲ್ಲಿ ಮಹಾಮಾರಿಯ ಆರ್ಭಟ ಮುಂದುವರೆದಿದ್ದು,ಇಲ್ಲಿನ ಕಸಬ ಗ್ರಾಮದಲ್ಲಿ ಅತಿ ಹೆಚ್ಚು ಪ್ರಕರಣಗಳು (10) ದಾಖಲಾಗಿವೆ. ಅಲ್ಲದೇ ತಾಲೂಕಿನಲ್ಲಿ ಸುಮಾರು 16 ಕಂಟೇನ್​ಮೆಂಟ್ ವಲಯಗಳಾದಂತಾಗಿದ್ದು, ಒಟ್ಟು 26 ಪ್ರಕರಣಗಳು ಇವುಗಳಲ್ಲಿ ದೃಢವಾಗಿವೆ.

bantwala
ಬಂಟ್ವಾಳ

By

Published : Jun 30, 2020, 12:56 PM IST

ಬಂಟ್ವಾಳ:ತಾಲೂಕಿನಲ್ಲಿ ಕೋವಿಡ್ ಪ್ರಕರಣಗಳು ನಿರಂತರ ಏರುಗತಿಯಲ್ಲಿ ಸಾಗುತ್ತಿದ್ದು, ಎರಡು ದಿನಗಳಲ್ಲಿ ಒಟ್ಟು 10 ಜನರಿಗೆ ಪಾಸಿಟಿವ್​​ ಕಂಡು ಬಂದಿದೆ.

ಜೂನ್ 27 ರಂದು 3 ಹಾಗೂ 28 ರಂದು 7 ಪ್ರಕರಣಗಳು ಪತ್ತೆಯಾಗಿದ್ದು, ಎಲ್ಲ ಪ್ರದೇಶಗಳನ್ನೂ ಸೀಲ್​ಡೌನ್​ ಮಾಡಲಾಗಿದೆ. ಜೂನ್ 29 ರಂದು ಯಾವುದೇ ಪ್ರಕರಣ ಪತ್ತೆಯಾಗದಿದ್ದರೂ ಇದೀಗ ಮತ್ತೆ ಸೋಂಕು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಜೂನ್ 27 ರಂದು ತಾಲೂಕಿನ ಕಸಬ ಅನಂತಾಡಿ ಮತ್ತು ಪುಣಚದಲ್ಲಿ ಪ್ರಕರಣಗಳು ಪತ್ತೆಯಾಗಿದ್ದು, ಅವುಗಳ ಪೈಕಿ ಕಸಬ ಗ್ರಾಮದ ಮಹಿಳೆ ಸಾವನ್ನಪ್ಪಿದ್ದಾರೆ. ಹೀಗಾಗಿ ಇವರು ವಾಸಿಸುತ್ತಿದ್ದ ಮನೆಗಳನ್ನು ಸೀಲ್​ಡೌನ್​​ ಮಾಡಲಾಗಿದ್ದು, ಕಂಟೇನ್​ಮೆಂಟ್​​​​​​ ವಲಯ ಎಂದು ಘೋಷಿಸಲಾಗಿದೆ.

ಜೂನ್ 28 ರಂದು ತಾಲೂಕಿನ ತೆಂಕಬೆಳ್ಳೂರು, ಸಜೀಪ ಮುನ್ನೂರು, ಮಾರಿಪಳ್ಳ, ಕಂಬಳಬೆಟ್ಟು, ಕಲ್ಲಡ್ಕ, ಮೇರಮಜಲು, ಅಮ್ಟೂರು ಪ್ರದೇಶಗಳಲ್ಲಿ ಪಾಸಿಟಿವ್ ಪ್ರಕರಣಗಳು ಬಂದಿರುವ ಹಿನ್ನೆಲೆ ಆಯಾ ಸೋಂಕಿತರ ಮನೆಗಳನ್ನು ಕಂಟೇನ್​ಮೆಂಟ್ ವಲಯ ಎಂದು ಘೋಷಿಸಿ ಸೀಲ್​ಡೌನ್ ಮಾಡಲಾಗಿದೆ.

ತಾಲೂಕಿನಲ್ಲಿ ಸುಮಾರು 16 ಕಂಟೇನ್​ಮೆಂಟ್ ವಲಯಗಳಾದಂತಾಗಿದ್ದು, 26 ಪ್ರಕರಣಗಳು ಇವುಗಳಲ್ಲಿ ದಾಖಲಾಗಿವೆ. ಈ ಹಿಂದೆ ಸಜೀಪನಡು, ಬಿಕಸ್ಬಾ ನರಿಕೊಂಬು, ತುಂಬೆ, ನಾವೂರು, ನೆಟ್ಲಮುಡ್ನೂರು ಅಳಿಕೆಗಳನ್ನು ಕಂಟೇನ್​ಮೆಂಟ್ ವಲಯಗಳನ್ನಾಗಿಸಲಾಗಿತ್ತು.

ಕಸಬ ಗ್ರಾಮದಲ್ಲಿ ಅತಿ ಹೆಚ್ಚು ಪ್ರಕರಣಗಳು (10) ದಾಖಲಾಗಿವೆ. ಉಳಿದಂತೆ ಅಳಿಕೆ (2), ತುಂಬೆ, ನಾವೂರು, ನೆಟ್ಲಮುಡ್ನೂರು, ಸಜೀಪನಡು, ನರಿಕೊಂಬು, ಮಾರಿಪಳ್ಳ, ಕಂಬಳಬೆಟ್ಟು, ಕಲ್ಲಡ್ಕ, ಮೇರಮಜಲು, ಅಮ್ಟೂರು, ಸಜೀಪಮುನ್ನೂರು, ತೆಂಕಬೆಳ್ಳೂರು, ಅನಂತಾಡಿ, ಪುಣಚಗಳಲ್ಲಿ ಒಂದೊಂದು ಪ್ರಕರಣಗಳು ದಾಖಲಾಗಿದ್ದವು.

ಇದಲ್ಲದೇ, ಮುಂಬೈ, ವಿದೇಶಗಳಿಂದ ಬಂದು ಕ್ವಾರಂಟೈನ್​ನಲ್ಲಿದ್ದ ತಾಲೂಕಿನವರಿಗೂ ಪಾಸಿಟಿವ್ ಪತ್ತೆಯಾದ ಹಿನ್ನೆಲೆ ಅವರನ್ನು ಮಂಗಳೂರಿನಲ್ಲಿ ಚಿಕಿತ್ಸೆಗೊಳಪಡಿಸಲಾಗಿತ್ತು.

ABOUT THE AUTHOR

...view details