ಕರ್ನಾಟಕ

karnataka

ETV Bharat / state

ಗ್ರಾಪಂ ಅಧ್ಯಕ್ಷ ವಿರುದ್ಧ ಮಾನಭಂಗಕ್ಕೆ ಯತ್ನ ಆರೋಪ : ಇದು ಆಧಾರರಹಿತ ಎಂದ ಕನ್ಯಾನ ಕಾಂಗ್ರೆಸ್ - ವಿಟ್ಲ ಪೊಲೀಸ್ ಠಾಣೆ

ಸಿಬ್ಬಂದಿ ನೀರಿನ ಸಂಪರ್ಕ ಕಡಿತಗೊಳಿಸಿರಲಿಲ್ಲ. ಆದರೆ, ಅದೇ ದಿನ ಸಂಜೆ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಅಧ್ಯಕ್ಷ ರಹಮಾನ್ ಬಂದು ಮಾನಭಂಗ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ..

kanyana GP president
ಬಂಟ್ವಾಳ

By

Published : Jun 18, 2021, 3:46 PM IST

ಬಂಟ್ವಾಳ :ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಗ್ರಾಮ ಪಂಚಾಯತ್‌ ಅಧ್ಯಕ್ಷ ಕೆ.ಪಿ.ಅಬ್ದುಲ್ ರಹಮಾನ್ ವಿರುದ್ಧ ಮಹಿಳೆಯೊಬ್ಬರು ಮಾನಭಂಗಕ್ಕೆ ಯತ್ನಿಸಿದ ಕುರಿತು ದೂರು ನೀಡಿದನ್ವಯ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದೂರು ಸತ್ಯಕ್ಕೆ ದೂರ ಎಂದು ಹೇಳಿರುವ ಕನ್ಯಾನ ವಲಯ ಕಾಂಗ್ರೆಸ್, ಅಧ್ಯಕ್ಷರ ಜನಪರ ಕಾರ್ಯಗಳನ್ನು ಸಹಿಸದ ಕಾಣದ ಕೈಗಳು ದೂರು ನೀಡಿವೆ. ಇದು ರಾಜಕೀಯವಾಗಿ ತೇಜೋವಧೆ ಮಾಡುವ ತಂತ್ರವಷ್ಟೇ ಎಂದಿದ್ದಾರೆ.

ಸ್ಥಳೀಯ ನಿವಾಸಿ 23 ವರ್ಷದ ಯುವತಿ ಮನೆಯ ನೀರಿನ ಸಂಪರ್ಕ ಕಡಿತಗೊಳಿಸುವುದಾಗಿ ಅಧ್ಯಕ್ಷ ರಹಮಾನ್ ತಿಳಿಸಿರುವುದಾಗಿ ಪಂಚಾಯತ್ ಸಿಬ್ಬಂದಿ ಹೇಳಿದ್ದರು. ಆದರೆ, ತಾನು ನೀರಿನ ಬಿಲ್ ಪಾವತಿಸಿರುವುದಾಗಿ ಯುವತಿ ಹೇಳಿದ್ದಾಳೆ.

ಹೀಗಾಗಿ, ಸಿಬ್ಬಂದಿ ನೀರಿನ ಸಂಪರ್ಕ ಕಡಿತಗೊಳಿಸಿರಲಿಲ್ಲ. ಆದರೆ, ಅದೇ ದಿನ ಸಂಜೆ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಅಧ್ಯಕ್ಷ ರಹಮಾನ್ ಬಂದು ಮಾನಭಂಗ ಮಾಡಲು ಪ್ರಯತ್ನಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details