ಮಂಗಳೂರು:ಮೇಕೆಗಳನ್ನು ಸಾಗಿಸುತ್ತಿದ್ದ ಲಾರಿವೊಂದು ಕಾಲೇಜು ಬಸ್ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ 15 ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟಿರುವ ಘಟನೆ ಪುತ್ತೂರು ತಾಲೂಕಿನ ಮಿತ್ತೂರಲ್ಲಿ ನಡೆದಿದೆ.
ಕಾಲೇಜು ಬಸ್ಗೆ ಲಾರಿ ಡಿಕ್ಕಿ: 15ಕ್ಕೂ ಹೆಚ್ಚು ಮೇಕೆಗಳು ಬಲಿ
ಕಾಲೇಜು ಬಸ್ವೊಂದಕ್ಕೆ ಮೇಕೆಗಳನ್ನು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ 15 ಕ್ಕೂ ಹೆಚ್ಚು ಮೇಕೆಗಳು ಬಲಿಯಾದ ಘಟನೆ ಪುತ್ತೂರು ತಾಲೂಕಿನ ಮಿತ್ತೂರು ಎಂಬಲ್ಲಿ ನಡೆದಿದೆ.
ಕಾಲೇಜು ಬಸ್ಗೆ ಆಡು ಸಾಗಾಟ ಲಾರಿ ಡಿಕ್ಕಿ
ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಸಹ ಗಾಯಗೊಂಡಿದ್ದಾನೆ.ಕುಂಬ್ರದಿಂದ ಬಿ ಸಿ ರೋಡ್ ಕಡೆಗೆ ಬರುತ್ತಿದ್ದ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಿದ್ದ ಬಸ್ಗೆ ಎದುರು ಬರುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಈ ವೇಳೆ ಕಾಲೇಜು ಬಸ್ನ ಮುಂಭಾಗ ಮತ್ತು ಲಾರಿ ಸಂಪೂರ್ಣ ಜಖಂ ಆಗಿವೆ. ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.