ಕರ್ನಾಟಕ

karnataka

ETV Bharat / state

ಸಿಎಂ ಮಂಗಳೂರು ಪ್ರವಾಸ: ಬಿಜೆಪಿ ವಿಶೇಷ ಸಭೆಯಲ್ಲಿ ಭಾಗಿಯಾಗಲಿರುವ ಬಿಎಸ್​ವೈ - ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರು ಪ್ರವಾಸ

ನಿನ್ನೆ ಸಂಜೆ ಮಂಗಳೂರು ತಲುಪಿರುವ ಸಿಎಂ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ರಮಣ ಪೈ ಸಭಾಂಗಣದಲ್ಲಿ ನಡೆಯಲಿರುವ ಬಿಜೆಪಿ ವಿಶೇಷ ಸಭೆ ಉದ್ಘಾಟನೆ ಮಾಡಲಿದ್ದಾರೆ.

cm-b-s-yeddyurappa-to-inaugurate-bjp-executive-meeting-in-mangaluru
ಸಿಎಂ ಮಂಗಳೂರು ಪ್ರವಾಸ

By

Published : Nov 5, 2020, 9:38 AM IST

Updated : Nov 5, 2020, 9:55 AM IST

ಮಂಗಳೂರು:ಬಂದರು ನಗರಿ ಮಂಗಳೂರಿನಲ್ಲಿ‌ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಇಂದು ನಡೆಯಲಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.

ನಗರದ ಕೊಡಿಯಾಲ್ ಬೈಲ್​ನಲ್ಲಿರುವ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಬೆಳಗ್ಗೆ 10.15ಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ. ಪಕ್ಷದ ಕೋರ್ ಕಮಿಟಿ ಸಭೆಯು ಅಲ್ಲಿಯೇ ಸಮೀಪದಲ್ಲಿರುವ ಓಶಿಯನ್ ಪರ್ಲ್ ಹೋಟೆಲ್​ನಲ್ಲಿ ಇಡೀ ದಿನ‌ ನಡೆಯಲಿದೆ.

ಮುಖ್ಯಮಂತ್ರಿ ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ, ಸಚಿವರಾದ ಆರ್.ಅಶೋಕ್, ಸಿ.ಟಿ.ರವಿ, ಕೆ.ಎಸ್. ಈಶ್ವರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿನ್ನೆಯೇ ನಗರಕ್ಕೆ ಆಗಮಿಸಿದ್ದಾರೆ. ಸುಮಾರು 120 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.

ಕೇಂದ್ರ ಹಾಗೂ ರಾಜ್ಯದ ನಾಯಕರು ಸಭೆಯಲ್ಲಿ ಪಾಲ್ಗೊಳ್ಳುವುದರಿಂದ ಸಭೆ ನಡೆಯುವ ಸುತ್ತಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಮಿಷನರೇಟ್ ಪೊಲೀಸರ ಹೊರತಾಗಿ ಕೆಎಸ್ಆರ್​ಪಿ ಮತ್ತು ಸಿಎಆರ್ ಪಡೆಯ ಪೊಲೀಸರನ್ನು ಬಂದೋಬಸ್ತ್ ವ್ಯವಸ್ಥೆಗೆ ನಿಯೋಜಿಸಲಾಗಿದೆ.

Last Updated : Nov 5, 2020, 9:55 AM IST

ABOUT THE AUTHOR

...view details