ಕರ್ನಾಟಕ

karnataka

ETV Bharat / state

10 ಸಾವಿರ ಡಾಲರ್ ಕರೆನ್ಸಿಯೊಂದಿಗೆ ಮಂಗಳೂರು ಏರ್​ಪೋರ್ಟ್​ನಲ್ಲಿ ಪ್ರಯಾಣಿಕ ಅರೆಸ್ಟ್​ - ಸಿಐಎಸ್​ಎಫ್ ಅಧಿಕಾರಿಗಳು

ವಿಮಾನ ಪ್ರಯಾಣಿಕನೋರ್ವನಿಂದ 10 ಸಾವಿರ ಡಾಲರ್ ವಿದೇಶಿ ಕರೆನ್ಸಿಯನ್ನು ಮಂಗಳೂರು ವಿಮಾಣ ನಿಲ್ದಾಣದಲ್ಲಿ ಸಿಐಎಸ್​ಎಫ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಸಿಕ್ಕಿಬಿದ್ದ ಪ್ರಯಾಣಿಕ

By

Published : Aug 19, 2019, 8:26 PM IST

ಮಂಗಳೂರು: ದುಬೈಗೆ ಹೋಗಲು ಯತ್ನಿಸುತ್ತಿದ್ದ ಪ್ರಯಾಣಿಕನೋರ್ವನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಅಧಿಕಾರಿಗಳು 10 ಸಾವಿರ ಡಾಲರ್ ವಶಪಡಿಸಿಕೊಂಡು ಪ್ರಯಾಣಿಕನನ್ನು ಕಸ್ಟಮ್ಸ್​​ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಬೆಂಗಳೂರಿನ ಶಶಾಂಕ್ ಬೈಸಾನಿ ಎಂಬಾತ ಬಂಧಿತ ಪ್ರಯಾಣಿಕ. ಈತ ಮಂಗಳೂರಿನಿಂದ ದುಬೈಗೆ ಹೋಗುತ್ತಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಈತನನ್ನು ಸಿಐಎಸ್​ಎಫ್ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದ ಸಂದರ್ಭದಲ್ಲಿ 10 ಸಾವಿರ ಡಾಲರ್ ವಿದೇಶಿ ಕರೆನ್ಸಿ ಸಿಕ್ಕಿದೆ. ವಿದೇಶಿ ಕರೆನ್ಸಿ ಮತ್ತು ಪ್ರಯಾಣಿಕನನ್ನು ಸಿಐಎಸ್ಎಫ್ ಅಧಿಕಾರಿಗಳು ಕಸ್ಟಮ್ಸ್​​ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದು, ತನಿಖೆ ಮುಂದುವರಿದಿದೆ.

ABOUT THE AUTHOR

...view details