ಬೆಳ್ತಂಗಡಿ: ಮನೆಯ ಬಳಿ ತೆಂಗು ನೆಡಲೆಂದು ಹಿಂದಿನ ದಿನ ತೋಡಿದ್ದ ಮೂರೂವರೆ ಅಡಿ ಆಳದ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದ ಎರಡೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ತೆಕ್ಕಾರು ಗ್ರಾಮದ ಬಾಜಾರ ಜನತಾ ಕಾಲೊನಿಯಲ್ಲಿ ನಡೆದಿದೆ.
ತೆಂಗು ನೆಡಲು ತೋಡಿದ್ದ ಹೊಂಡಕ್ಕೆ ಮಗು ಬಿದ್ದು ದಾರುಣ ಸಾವು
ಮನೆ ಬಳಿ ತೆಂಗು ನೆಡಲೆಂದು ಹಿಂದಿನ ದಿನ ತೋಡಿದ್ದ ಮೂರೂವರೆ ಅಡಿ ಆಳದ ಹೊಂಡಕ್ಕೆ ಆಕಸ್ಮಿಕವಾಗಿ ಬಿದ್ದ ಎರಡೂವರೆ ವರ್ಷದ ಮಗು ದಾರುಣವಾಗಿ ಸಾವನ್ನಪ್ಪಿದ ಘಟನೆ ತೆಕ್ಕಾರು ಗ್ರಾಮದ ಬಾಜಾರ ಜನತಾ ಕಾಲೊನಿಯಲ್ಲಿ ನಡೆದಿದೆ.
ಇಲ್ಲಿನ ಬಿ.ಎಸ್ ಅಬ್ದುಲ್ ಹಾರಿಸ್ ಅವರ ಪುತ್ರ ಮುಹಮ್ಮದ್ ಇಶಾಂ ಮೃತ ದುರ್ದೈವಿ ಮಗು. ಅಂದು ಜೋರಾದ ಮಳೆ ಇದ್ದುದರಿಂದ ಹಿಂದಿನ ದಿನ ತೋಡಿದ್ದ ಹೊಂಡದಲ್ಲಿ ನೀರು ತುಂಬಿತ್ತು. ಮಗು ಅಕ್ಕಪಕ್ಕದ ಮನೆಗೆ ಆಟವಾಡುತ್ತಾ ಹೋಗಿ ಬರುವುದು ಸಹಜವಾಗಿರುವುದರಿಂದ, ಅರ್ಧ ಗಂಟೆಗಿಂತ ಹೆಚ್ಚು ಕಾಲ ಮಗು ಕಾಣದಾದಾಗ ಘಟನೆ ಬೆಳಕಿಗೆ ಬಂದಿದೆ. ಮೃತ ಮಗು ತಂದೆ, ತಾಯಿ, ಅಕ್ಕ ಹಾಗೂ ಬಂಧು ವರ್ಗದವರನ್ನು ಅಗಲಿದ್ದಾನೆ.
ಮೃತರ ಮನೆಗೆ ತೆಕ್ಕಾರು ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್ ತೆಕ್ಕಾರು, ನಿರ್ದೇಶಕ ಎನ್.ಹೆಚ್ ಅಬ್ದುಲ್ ರಹಮಾನ್, ಬಾಜಾರ ಮಸ್ಜಿದ್ ಗೌರವಾಧ್ಯಕ್ಷ ಬಿ.ಎಮ್ ಹುಸೈನ್, ಸಹಿತ ಗಣ್ಯರು ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.