ಕರ್ನಾಟಕ

karnataka

ETV Bharat / state

ಬಾಲಕಿಗೆ ಕಿರುಕುಳ ನೀಡಿದ ಆರೋಪಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣ: ಮೂವರು ಅರೆಸ್ಟ್ - ETV Bharath Kannada news

ಅಪ್ರಾಪ್ತೆಗೆ ಕಿರುಕುಳ ನೀಡಿದ್ದ ಆರೋಪಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Accused of molesting the girl
ಬಾಲಕಿಗೆ ಕಿರುಕುಳ ನೀಡಿದ ಆರೋಪಿ

By

Published : Dec 18, 2022, 5:06 PM IST

ಮಂಗಳೂರು :ಅಪ್ರಾಪ್ತ ವಯಸ್ಕ ಬಾಲಕಿಯೊಬ್ಬಳಿಗೆ ಕಿರುಕುಳ ನೀಡಿದ ಆರೋಪಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ್ದ ದೂರನ್ನು ಆಧರಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮುಲ್ಕಿ ಬೆಳ್ಳಾಯೂರು ಗ್ರಾಮದ ಕೆಂಚನಕೆರೆಯ ದಿವ್ಯೇಶ್ ದೇವಾಡಿಗ (38), ರಾಜೇಶ್ ಕೆರೆಕಾಡು ಮತ್ತು ಯೋಗೀಶ್ ಕುಮಾರ್ ಬಂಧಿತರು.

ಅಪ್ರಾಪ್ತೆಗೆ ಕಿರುಕುಳ ನೀಡಿದ್ದ ಆರೋಪಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಕೇಸ್​.. ಮೂವರ ಬಂಧನ

ಡಿಸೆಂಬರ್ 13 ರಂದು ಮುಲ್ಕಿಯ ಕೆರೆಕಾಡು ಗ್ರಾಮದಲ್ಲಿ ಬಾಲಕಿಯನ್ನು ಬೈಕ್​ನಲ್ಲಿ ಹಿಂಬಾಲಿಸಿ ಆರೋಪಿಯು ಅಸಭ್ಯವಾಗಿ ವರ್ತಿಸಿದ್ದನು. ಈ ಹಿನ್ನೆಲೆ ಬಾಲಕಿ ತಂದೆ ಹಾಗೂ ಸ್ನೇಹಿತರಿಬ್ಬರು ಆರೋಪಿಯನ್ನು ಹಿಂಬಾಲಿಸಿಕೊಂಡು ಬಂದಿದ್ದರು. ನಿನ್ನೆ ಮತ್ತೆ ಬಾಲಕಿ ಜೊತೆಗೆ ಅನುಚಿತವಾಗಿ ವರ್ತಿಸಿದ್ದನ್ನು ಕಂಡು ಬಾಲಕಿ ತಂದೆ ಮತ್ತು ಸ್ನೇಹಿತರು ವ್ಯಕ್ತಿಯನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದರು. ನಂತರ ಆರೋಪಿಯನ್ನು ಬಂಧಿಸಿ ಪೊಕ್ಸೋ ಪ್ರಕರಣ ದಾಖಲಿಸಲಾಗಿದೆ.

ಮತ್ತೊಂದೆಡೆ ಗಂಭೀರವಾಗಿ ಗಾಯಗೊಂಡಿದ್ದ ಆರೋಪಿ ನೀಡಿರುವ ದೂರನ್ನು ಆಧರಿಸಿ ಮೂವರನ್ನು ಪೊಲೀಸರು ಇಂದು ಬಂಧಿಸಿದ್ದಾರೆ.

ಇದನ್ನೂ ಓದಿ :ಮಂಗಳೂರು: ಬೈಕ್‌ನಲ್ಲಿ ಹಿಂಬಾಲಿಸಿ ಬಾಲಕಿಗೆ ಕಿರುಕುಳ, ಕಂಬಕ್ಕೆ ಕಟ್ಟಿ ಆರೋಪಿಗೆ ಥಳಿತ

ABOUT THE AUTHOR

...view details